ಮೈಸೂರು, ಏ.02, 2023 : (www.justkannada.in news) ಪ್ರಧಾನಿಮೋದಿ ಏ. ೯ ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ.
ಚುನಾವಣಾ ನೀತಿ ಸಂಹಿತೆ ಎಲ್ಲರಿಗೂ ಒಂದೆ. ಎಂಎಲ್ ಎಗೂ ಒಂದೇ ಪ್ರಧಾನಿಗೂ ಒಂದೇ. ಚುನಾವಣಾ ಆಯೋಗ ಅವರಿಗೆ ಅನುಮತಿನೀಡಿದೆಯೇ? ಅದು ಸರ್ಕಾರಿ ಕಾರ್ಯಕ್ರಮ, ಅವರು ಭಾಗವಹಿಸಲು ಹೇಗೆ ಸಾಧ್ಯ. ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದೆಯೇ ನೋಡಬೇಕು. ಚುನಾವಣೆ ನೀತಿ ಸಂಹಿತೆ ,ನಿಯಮ ಎಲ್ಲರಿಗೂ ಒಂದೇ ಎಂದ ಮಾಜಿ ಸಿಎಂ ಸಿದ್ದರಾಮಯ್ಯ.
ಟಿಕೆಟ್ ಫೈನಲ್ ಲಿಸ್ಟ್ :
ಮೈಸೂರಿನ ಚಾಮರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ನಾಳಿದ್ದು ಇತ್ಯರ್ಥವಾಗಲಿದೆ . ನಾಳಿದ್ದು ಮೀಟಿಂಗ್ ಬಳಿಕ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಕೋಲಾರಕ್ಕೆ ಹೋಗುವುದು ಹೈಕಮಾಂಡ್ ತೀರ್ಮಾನವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವರುಣಾದಲ್ಲಿ ಸಿದ್ದರಾಮಯ್ಯರನ್ನ ಕಟ್ಟಿಹಾಕುವ ವಿಪಕ್ಷಗಳ ಪ್ಲಾನ್ ವಿಚಾರ , ಯಾರು, ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯ್ಯಲ್ಲಿದೆ . ನಾನು ವರುಣಾಕ್ಕೆ ಪ್ರಚಾರಕ್ಕೆ ಈಗಲೂ ಹೋಗುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಹೋಗುತ್ತೇನೆ. ಎಲ್ಲವನ್ನೂ ನನ್ನ ಮಗ ಶಾಸಕ ಡಾ. ಯತೀಂದ್ರ ನೋಡಿಕೊಳ್ಳುತ್ತಾರೆ.
Key words : siddaramaiha-mysore-election-varuna-modi-code-of-conduct-violation