ಮೈಸೂರು,ಜುಲೈ,20,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡ ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಸಂರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಪಾರಂಪರಿಕ ತಜ್ಞ ರಂಗರಾಜ್ ಚಾಲನೆ ನೀಡಿದರು.
ಲ್ಯಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನ ಕೆಡವಿ ಪುನಹ ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ 10 ದಿನಗಳ ಕಾಲ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಲ್ಯಾನ್ಸ್ ಡೌನ್ ಕಟ್ಟಡದ ಮುಂದೆಯೇ ಪಾರಂಪರಿಕ ತಜ್ಞ ರಂಗರಾಜ್ ಚಾಲನೆ ನೀಡಿದರು.
ಪಾರಂಪರಿಕ ಕಟ್ಟಡ ಸಂರಕ್ಷಣಾ ತಂಡ ಈ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಸಹ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳು ಈಗಲೂ ಸುರಕ್ಷಿತವಾಗಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಟ್ಟಡಗಳನ್ನು ಕೆಡವುದು ಬೇಡ ಎಂದು ಸರ್ಕಾರಕ್ಕೆ ಪಾರಂಪರಿಕ ಕಟ್ಟಡ ಸಂರಕ್ಷಣಾ ತಂಡ ಮನವಿ ಮಾಡಿದೆ.
ENGLISH SSUMMARY…
Signature campaign to protect heritage structures in Mysuru
Mysuru, July 20, 2021 (www.justkannada.in): Heritage expert Rangaraj has initiated a signature campaign to save Mysuru City’s illustrious and heritage structure Lansdowne building, and the Devaraja Market.
The government has decided to pull down the Lansdowne and Devaraja market buildings and reconstruct them. A signature campaign is running for the last ten days to protect these heritage buildings. Heritage expert Rangaraj started the signature campaign in front of the Lansdowne building.
The Heritage Building Protection Team has initiated the campaign. The team will collect signatures from the public and submit an appeal to the Chief Minister to protect the heritage buildings. According to them, the Lansdowne building and Devaraja market building are still safe, and hence they have requested the government not to pull them down.
Keywords: Lansdowne Building/ Devaraja Market/ heritage buildings/ signature campaign/ state government/ pull down
Key words: Signature- Collection -Campaign – Conservation –Heritage- Lansdowne- Building-mysore