ಬೆಂಗಳೂರು, ಮಾರ್ಚ್ 18, 2023 (www.justkannada.in): ಕಾಂಕ್ರಿಟ್ ಕಾಡಿನ ನಡುವೆ ಕಾಲಕಳೆಯುತ್ತಿರುವ ಬೆಂಗಳೂರಿಗರು ಕೇರಳದ ವೈನಾಡಿನ ಸೌಂದರ್ಯವನ್ನು ರಾಜಧಾನಿಯಲ್ಲಿದ್ದುಕೊಂಡೇ ಕಣ್ತುಂಬಿಕೊಳ್ಳಬಹುದಾಗಿದೆ!
ಹೌದು. ಹಿರಿಯ ಛಾಯಾಗ್ರಾಹಕ ಎನ್.ಪಿ.ಜಯನ್ ಅವರು ಸೆರೆಹಿಡಿದಿರುವ ವೈಯನಾಡಿದ ಕಾಡು-ಮೇಡು, ಬೆಟ್ಟ ಕಣಿವೆ ಹಾಗೂ ಪ್ರಾಣಿ-ಪಕ್ಷಿಗಳ ಛಾಯಾಚಿತ್ರಗಳನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯದ ಕೆಲಸ! ಸೌಂದರ್ಯ ರಾಶಿಯನ್ನು ಹೊತ್ತು ಮಲಗಿರುವ ಕಣಿವೆ ಪ್ರದೇಶದಲ್ಲಿ ತಿಂಗಳುಗಟ್ಟಲೇ ಚಾರಣ ಮಾಡಿ ಅಲ್ಲಿನ ವನ್ಯಜೀವಿ ಹಾಗೂ ಪ್ರಾಕೃತಿಕ ಸೊಬಗನ್ನು ಜಯನ್ ಸೆರೆಹಿಡಿದಿದ್ದಾರೆ.
100ಕ್ಕೂ ಹೆಚ್ಚಿನ ಛಾಯಾಚಿತ್ರಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಮಾರ್ಚ್ 19ರವರೆಗೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಆಸಕ್ತರು ಪಾಲ್ಗೊಂಡು ಜಯನ್ ಅವರು ತಿಂಗಳುಗಟ್ಟಲೇ ಶ್ರಮವಹಿಸಿ ಸೆರೆಹಿಡಿದಿರುವ ಅಪರೂಪದ ಫೋಟೋಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
‘ನನ್ನ ಜೀವನ ಮತ್ತು ವೃತ್ತಿಯ ಅತ್ಯುತ್ತಮ ಭಾಗವೆಂದರೆ ನಾನು ಕಣಿವೆಯಲ್ಲಿ ಕಳೆದ ಸಮಯ. ಯಾವುದೇ ಮಾನವ ಜನಸಂಖ್ಯೆಯಿಲ್ಲದ ಕಾಡಿನಲ್ಲಿ ಹಲವಾರು ತಿಂಗಳುಗಳ ಕಾಲ ಚಾರಣ ಮಾಡುವುದು ಕಷ್ಟಕರವಾಗಿತ್ತು. ಆದರೆ ಇದು ನನ್ನ ಪ್ರಯತ್ನಕ್ಕೆ ಯೋಗ್ಯವಾಗಿದೆ. ಈ ಛಾಯಾಚಿತ್ರಗಳನ್ನು ಮಕ್ಕಳು ನೋಡಬೇಕೆಂದು ನಾನು ಬಯಸುತ್ತೇನೆ. ನನ್ನ ಛಾಯಾಚಿತ್ರಗಳನ್ನು ಶಾಲೆಗಳಿಗೆ ಕೊಂಡೊಯ್ಯಲು ನಾನು ಬಯಸುತ್ತೇನೆ’ ಎನ್ನುತ್ತಾರೆ ಜಯನ್.