ಮೈಸೂರು,ಜನವರಿ,24,2025 (www.justkannada.in): ಕೇಂದ್ರ ರೇಷ್ಮೆ ಮಂಡಳಿ ಮತ್ತು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನವದೆಹಲಿಯ ಸಹಯೋಗದೊಂದಿಗೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ನಡೆಯಿತು.
ಈ ತರಬೇತಿ ಕಾರ್ಯಕ್ರಮವನ್ನು ಪಿ.ಶಿವಕುಮಾರ್, ಐಎಫ್ ಎಸ್, ಸದಸ್ಯ ಕಾರ್ಯದರ್ಶಿ, ಕೇಂದ್ರ ರೇಷ್ಮೆ ಮಂಡಳಿ ಮತ್ತು ಮಹಾ ಕಾರ್ಯದರ್ಶಿ, ಅಂತರರಾಷ್ಟ್ರೀಯ ರೇಷ್ಮೆ ಆಯೋಗ, ಇವರು ಉದ್ಘಾಟಿಸಿ ಶಿಬಿರದ ಉದ್ದೇಶಗಳು ಹಾಗೂ ರೇಷ್ಮೆ ಮತ್ತು ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ತರಬೇತಿ ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ .ಪಿ.ಶಿವಕುಮಾರ್, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಾಂತ್ರಿಕತೆಗಳನ್ನು ಅವಿಷ್ಕಾರಿಸಿದೆ. ಈ ತರಬೇತಿ ಶಿಬಿರದಲ್ಲಿ ತಾಂತ್ರಿಕತೆಗಳನ್ನು ವಿಜ್ಞಾನಿಗಳು ತರಬೇತಿ ಅವಧಿಯಲ್ಲಿ ಪ್ರಯೋಗಿಕವಾಗಿ ವಿವರಿಸುತ್ತಾರೆ. ಅದನ್ನು ತಾವು ಅರಿತು ತಮ್ಮ ದೇಶಗಳಿಗೆ ಹೋದ ಮೇಲೆ ರೇಷ್ಮೆ ಕೃಷಿಯಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಇನ್ನು ಅಂತರರಾಷ್ಟ್ರೀಯ ರೇಷ್ಮೆ ಆಯೋಗದ ಕೇಂದ್ರ ಸ್ಥಾನವನ್ನು ಭಾರತಕ್ಕೆ 2013ರಲ್ಲಿ ತರಲಾಯಿತು. ನಂತರ ಸದಸ್ಯ ರಾಷ್ಟ್ರಗಳ ಸಂಖ್ಯೆಯು 13 ರಿಂದ 23ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕರಾದ (ತಾಂತ್ರಿಕ) ಡಾ.ಎಸ್, ಮಂಥಿರಾ ಮೂರ್ತಿಅವರು ಮಾತನಾಡಿ, ಸಮಶೀತೊಷ್ಣದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳನ್ನು ಅವಿಷ್ಕಾರ ಮಾಡಿದೆ ಎಂದರು. ಮುಂದಿನ ದಿನಗಳಲ್ಲಿ ರೇಷ್ಮೆ ಮೊಟ್ಟೆ ತಯಾರಿಕೆ ಬಗ್ಗೆಯು ಅಂತರ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವು ಎಂದು ತಿಳಿಸಿದರು.
ಶಿಬಿರದಲ್ಲಿ, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಉಗಾಂಡಾ, ಥೈಲ್ಯಾಂಡ್, ರೊಮೇನಿಯಾ, ದಕ್ಷಿಣ ಸುಡಾನ್ ದೇಶಗಳಿಂದ ಸುಮಾರು 22 ಅಭ್ಯರ್ಥಿಗಳು ಭಾಗವಹಿಸಿದ್ದರು.
ಪದ್ಮನಾವ ನಾಯಕ್, ಸಹಾಯಕ ಕಾರ್ಯದರ್ಶಿ, ಐಎಸ್‍ಸಿ, ಬೆಂಗಳೂರು ಇವರು ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ನಿರ್ದೇಶಕರಾದ (ಪ್ರಭಾರ), ಡಾ. ಎಸ್. ಬಾಲಸರಸ್ವತಿ, ವಿಜ್ಞಾನಿ ಡಾ.ಎಲ್.ಕುಸುಮ, ಮೈಸೂರಿನ ಸಿ,ಎಸ್,ಆರ್,ಟಿ,ಐನ ಡಿ, ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ, ಡಾ. ಆರ್. ಮೀನಾಲ್, ಸಂಸ್ಥೆಯ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿ, ಯೋಜನಾ ಸಹಾಯಕರು ಉಪಸ್ಥಿತರಿದ್ದರು.
Key words: Silk and Silk Industry, Training, International Candidates, mysore