ನಿರುದ್ಯೋಗಿಗಳಿಗೆ ರೇಷ್ಮೆ ಕೃಷಿ ಆಧಾರ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಫೆಬ್ರವರಿ,21,2022(www.justkannada.in):  ಸಾಂಕ್ರಾಮಿಕ ರೋಗ ಕೊರೊನಾದಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇವರಲ್ಲಿ ಅನೇಕರು ನಗರದಿಂದ ಹಳ್ಳಿಗೆ ಧಾವಿಸಿದ್ದರು. ಆದರೆ, ರೇಷ್ಮೆಯಿಂದ ಬಹಳಷ್ಟು ನಿರುದ್ಯೋಗಿಗಳು ಉದ್ಯೋಗ ಕಂಡುಕೊಂಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಡಿಬಿಟಿ ಕರ್ನಾಟಕ ಕೌಶಲ್ಯ ವಿಜ್ಞಾನ ‌ಕಾರ್ಯಕ್ರಮ ಹಾಗೂ ರೇಷ್ಮೆ ಕೃಷಿ ತಂತ್ರಜ್ಞಾನದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಸಹಭಾಗಿತ್ವದಲ್ಲಿ ಮಾನಸ ಗಂಗೋತ್ರಿಯ ರೇಷ್ಮೆ ಕೃಷಿ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಬಯೋಟೆಕ್ ರಾಜಧಾನಿಯಾಗಿರುವ ಕರ್ನಾಟಕವು ಅತ್ಯಂತ ಪ್ರಾಚೀನ ಮತ್ತು ಅಭಿವೃದ್ಧಿ ಹೊಂದುತ್ತಿರುವ ಜೈವಿಕ ತಂತ್ರಜ್ಞಾನ ನೆಲೆಯಾಗಿದೆ. ಕೈಗಾರಿಕೆ ಮತ್ತು ಸ್ಟಾರ್ಟ್‌ ಅಪ್‌ಗಳಿಗೆ ಪ್ರೋತ್ಸಾಹ ನೀಡಿರುವುದರಿಂದ ಈ ಹೆಸರು ಬಂದಿದೆ. ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಸಿದ್ಧ ಜೈವಿಕ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಇದು ಒಳಗೊಂಡಿದೆ. ರೇಷ್ಮೆಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಸ್ತುತ ಕರ್ನಾಟಕ ಬಯೋಟೆಕ್ ಕೈಗಾರಿಕೆಗಳು ಸುಮಾರು 380 ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಕಂಪನಿಗಳನ್ನು ಮತ್ತು 270ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ ಗಳನ್ನು ಒಳಗೊಂಡಿವೆ, ಒಟ್ಟಾಗಿ ಭಾರತದಲ್ಲಿನ 60% ಬಯೋಟೆಕ್ ಕಂಪನಿಗಳಿವೆ. ಕರ್ನಾಟಕವು ದೇಶದಲ್ಲಿ ಜೈವಿಕ ತಂತ್ರಜ್ಞಾನದ ಕೇಂದ್ರವಾಗಿದ್ದು, ಭಾರತೀಯ ಜೈವಿಕ ತಂತ್ರಜ್ಞಾನ ಉದ್ಯಮದಿಂದ ಶೇ.35ರಷ್ಟು ಆದಾಯ ಬರುತ್ತಿದೆ. ರಾಜ್ಯವು ಸುಮಾರು ಶೇ.54 ರಷ್ಟು ಉದ್ಯೋಗಿಗಳನ್ನು ಹೊಂದಿದೆ ಮತ್ತು ಆದಾಯವು ಸುಮಾರು 33,351 ಕೋಟಿ ರೂ. ಇದೆ. ಈ ಕ್ಷೇತ್ರದಲ್ಲಿ ಶೇ.69ರಷ್ಟು ಹಾಗೂ ಶೇ.31ರಷ್ಟು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ರೇಷ್ಮೆ ಕೃಷಿ, ತೋಟಗಾರಿಕೆ, ಮೀನುಗಾರಿಕೆಗೆ ಮತ್ತಷ್ಟು ಬೇಡಿಕೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಡಿಬಿಟಿಯಿಂದ ಕೌಶಲ್ಯ ವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಕೃಷಿ ಬೆಳೆಗಳಲ್ಲಿ ರೇಷ್ಮೆ ಕೃಷಿಯು ಬಡತನವನ್ನು ಹೋಗಲಾಡಿಸಲು ಉತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ಸುಮಾರು 86 ಮಿಲಿಯನ್ ಜನರಿಗೆ ಲಾಭದಾಯಕ ಉದ್ಯೋಗವನ್ನು ಒದಗಿಸುತ್ತಿದೆ. ಇದರಲ್ಲಿ ಕರ್ನಾಟಕ ಪಾಲು ಹೆಚ್ಚಿದೆ ಎಂದರು. ಆದರೆ ಕರ್ನಾಟಕವು ಪ್ರಮುಖ ಪಾಲು ಹೊಂದಿದೆ.

ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿವಿಯ ಡೀನ್ ಡಾ.ಎಚ್.ಹೊನ್ನೇಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಿರನಗೆರೆ ಜಗದೀಶ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಬಿ. ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

Key words: Silk-farming -Mysore university-VC- G.Hemanth Kumar

ENGLISH SUMMARY…

Sericulture has become a dependable occupation for the unemployed: UoM VC
Mysuru, February 21, 2022 (www.justkannada.in): “Many people lost their jobs due to the COVID-19 Pandemic. Many among them returned to their native villages. Sericulture has given a new ray of hope for many among them,” opined Prof. G. Hemanth Kumar, Vice-Chancellor, University of Mysore.
He inaugurated a one-day workshop on DBT Karnataka Skill Science Program and Entrepreneurial Development in Sericulture Science, organized by the Sericulture Department. “Karnataka which is the capital of Biotechnology in the country is a major hub for ancient and developing biotechnology. The state has gained this recognition due to the encouragement given to industries and start-ups. It includes several national and international biotechnological research institutes of repute, private and public universities. New technology should be adopted in the field of sericulture and skills should be developed,” he suggested.
“The biotechnology sector in the state presently comprises 380 small, medium, and large companies and more than 270 start-ups. The State enjoys the pride of housing 60% of the total biotech companies in the country. Thus Karnataka is a major hub of biotechnology. The biotechnological sector is contributing 35% to the country’s income. The biotechnology sector in the state has provided 54% of jobs and is generating a revenue of Rs. 33,351 crore for the state’s exchequer. About 69% men and 31% women entrepreneurs are engaged in this sector,” he explained.
Dr. H. Honnegowda, Dean, JSS Science and Technological University, Rajyotsava award winner Kiranagere Jagadish and Prof. H.B. Manjunath, HoD were present.
Keywords: University of Mysore/biotechnology/ workshop