ಈ ಬಾರಿ ಸರಳ ಸ್ವಾತಂತ್ರೋತ್ಸವ : ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಧ್ವಜಾರೋಹಣ ಕಡ್ಡಾಯ..

ಮೈಸೂರು,ಆಗಸ್ಟ್,13,2021(www.justkannada.in): 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ, ಈ ಬಾರಿಯೂ ಧ್ವಜಾರೋಹಣ ಕ್ಕೆ ಮಾತ್ರ ಸೀಮಿತವಾಗಿದೆ. ಮೈಸೂರು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಧ್ವಜಾರೋಹಣ ಕಡ್ಡಾಯ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಡಿಡಿಪಿಐ ರಾಮಚಂದ್ರರಾಜೇ ಅರಸ್, ಸ್ವಾತಂತ್ರ್ಯ ದಿನಾಚರಣೆ ಅಚರಣೆಗೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಸರ್ಕಾರದ ಮಾರ್ಗಸೂಚಿ ಅನ್ವಯ ಸರಳ ಸ್ವಾತಂತ್ರೋತ್ಸವ ಆಚರಣೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಧ್ವಜಾರೋಹಣ ಕಡ್ಡಾಯವಾಗಿದ್ದು ಪ್ಲಾಸ್ಟಿಕ್ ಧ್ವಜ ಬಳಕೆಯನ್ನ ನಿಷೇಧಿಸಲಾಗಿದೆ. ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿಕ್ಷಕರಿಗೆ ಮಾತ್ರ ಅವಕಾಶ. ‌ಮಕ್ಕಳ ಭಾಗವಹಿಸುವಿಕೆ ಇರುವುದಿಲ್ಲ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲ್ಲ. ಈ ಬಾರಿಯೂ ಧ್ವಜಾರೋಹಣ ಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಣೆಯನ್ನು ಆನ್ ಲೈನ್ ಮೂಲಕ ವಾಟ್ಸಪ್ ಗ್ರೂಪ್ ಗಳಲ್ಲಿ ಮಕ್ಕಳಿಗೆ ತಲುಪಿಸಿ ಸೂಚನೆ ನೀಡಲಾಗಿದೆ. ಈ ಹಿಂದೆ ಮಕ್ಕಳಿಗೆ ಮನೆಯಲ್ಲೆ ವಿವಿಧ ಚಟುವಟಿಕೆಗಳನ್ನು ಮಾಡಿ ಕಳುಹಿಸುವಂತೆ ಸೂಚಿಸಲಾಗಿತ್ತು. ಸ್ವತಂತ್ರೋತ್ಸವದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆ ನೀಡಲಾಗಿದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾಹಿತಿ ನೀಡಿದರು.

ENGLISH SUMMARY…

Low key I-Day celebrations this year: Flag hoisting compulsory in all the Schools in Mysuru
Mysuru, August 13, 2021 (www.justkannada.in): The country is at the doorstep of the 75th Independence Day, which could have been celebrated in a grand manner. But, due to the fear of COVID-19 Pandemic this year’s I-Day celebrations has been limited only to flag hoisting. However, Ramachandraraje Urs, DDPI Mysuru has instructed to hoist the tricolours in all the schools compulsorily in Mysuru District.
“The Education Department has made all preparations for the celebration of Independence Day. This time the celebration will be very simple as per the government instructions. Flag hoisting in all the schools are made compulsory. Using plastic flags is restricted. Only SDMC members and teachers will be allowed to participate. There will be no students participation and no cultural activities. This year also the Independence Day is restricted only to flag hoisting,” he informed.
However, arrangements have been made to telecast the celebrations in schools online to reach the students.
Keywords: Independence Day/ 75th I-Day/ simple manner/ only flag hoisting

Key words: simple-independence day – Flag Hosting-all schools –mysore-district.