ಮೈಸೂರು,ಡಿಸೆಂಬರ್,5,2024 (www.justkannada.in): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಸಣಿಕಮ್ಮ ದೇವಾಲಯಕ್ಕೆ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.
ಹಿರಿಯ ಗಾಯಕಿ ಜಾನಕಿ ಅವರು ಮಸಣಿಕಮ್ಮ ದೇವರಿಗೆ ಸೀರೆ ಉಡುಗೊರೆಯಾಗಿ ನೀಡಿ ಭಕ್ತಿ ಸಮರ್ಪಿಸಿದದರು. ವಿಶೇಷ ಪೂಜೆ ನಂತರ ಅರ್ಚಕರು ಎಸ್.ಜಾನಕಿ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದರು. ಸಹ ಭಕ್ತರು ಸಹ ಜಾನಕಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ನಂತರ ಎಸ್.ಜಾನಕಿ ಅವರು ಪಿರಿಯಾಪಟ್ಟಣ ಪುರಸಭಾ ಸದಸ್ಯ ಪಿ.ಎನ್. ವಿನೋದ್ ರವರ ಮನೆಗೆ ಭೇಟಿ ನೀಡಿದ್ದು ಕುಟುಂಬಸ್ಥರಿಂದ ಸನ್ಮಾನ ಸ್ವೀಕಾರ ಮಾಡಿದರು.
Key words: mysore, Masanakamma temple, Singer, S.Janaki