ಬೆಂಗಳೂರು,ಮೇ,16,2022(www.justkannada.in): ಕಾಂಗ್ರೆಸ್ ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಬಗ್ಗೆ ತೀರ್ಮಾನ ಮಾಡಲಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಾನಿದ್ದೀನಿ, ನನ್ನ ಮಗ ಎಂಎಲ್ಎ ಆಗಿದ್ದಾನೆ. ಜನ ಅವರನ್ನು ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ. ನನಗೆ ಬರೀ 30 ಸಾವಿರ ಲೀಡ್ ಕೊಟ್ಟಿದ್ದರು, ಅವನಿಗೆ 58 ಸಾವಿರ ಲೀಡ್ ಕೊಟ್ಟಿದ್ದಾರೆ. ಜನ ಒಪ್ಪಿಕೊಳ್ಳುವುದಾದರೆ ರಾಜಕೀಯ ಮಾಡಲಿ ಎಂದಿದ್ದಾರೆ.
ನನ್ನ ಮಗನಿಗೆ ಜನ 50 ಸಾವಿರ ಲೀಡ್ ನೀಡಿದ್ದಾರೆ, ನನಗ್ಗೆ ಕೇವಲ 32 ಸಾವಿರ ಲೀಡ್ ಕೊಟ್ರು. ಜನ ಒಪ್ಪಿಕೊಳ್ಳೋವರೆಗೂ ಕುಟುಂಬ ರಾಜಕಾರಣ ಇರುತ್ತದೆ. ಅಪ್ಪ ನಿಂತುಕೊಂಡು ಮಗ ನಿಲ್ಲಬಾರದು ಆ ಮಾತೆಲ್ಲಾ ಫ್ಯಾಮಿಲಿ ರಾಜಕಾರಣವಾದರೆ, ಬಲತ್ಕಾರದಲ್ಲಿ ಇಂದು ಫ್ಯಾಮಿಲಿ ರಾಜಕಾರಣ ಮಾಡಿದರೆ ಅದು ಆಗಬಾರದು ಎಂದು ಸಿದ್ಧರಾಮಯ್ಯ ತಿಳಿಸಿದರು.
70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಬೇಡ ಎಂಬ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಆಯಾ ವ್ಯಕ್ತಿ ಆರೋಗ್ಯವಾಗಿದ್ದರೆ ರಾಜಕೀಯ ಮಾಡುವುದಕ್ಕೆ ತೊಂದರೆ ಇಲ್ಲ. ಯಾರು ವಯಸ್ಸಾಗಿ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅವರು ರಿಟೈರ್ಮೆಂಟ್ ತೆಗೆದುಕೊಳ್ಳಬಹುದು. ಬಲತ್ಕಾರವಾಗಿ ರಿಟೈರ್ ಆಗಿ ಅಂತ ಹೇಳುವುದು ಬೇಡ ಎಂದರು.
Key words: single-ticket-family-Former CM-Siddaramaiah