ಬೆಂಗಳೂರು,ಜೂ,30,2019(www.justkannada.in): ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ನಿರ್ದೇಶಕ ಮುಜಾಹಿದ್ದೀನ್ ನಿವಾಸದ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಗರದ ಪ್ರೆಜರ್ ಟೌನ್ ನ ಎಂಎಂ ರಸ್ತೆಯಲ್ಲಿರುವ ಮುಜಾಹಿದ್ದೀನ್ ನಿವಾಸದ ಮೇಲೆ ನಿನ್ನೆ ರಾತ್ರಿ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಡಿಸಿಪಿ ಗಿರೀಶ್ ಇಬ್ಬರು ಡಿವೈಎಸ್ ಪಿಗಳು ನೇತೃತ್ವದಲ್ಲಿ ದಾಳಿ ನಡೆಸಿದ್ದು ಮುಜಾಹಿದ್ದೀನ್ ಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮುಜಾಹಿದ್ದೀನ್ ಗೆ ಸೇರಿದ ಫಾರ್ಚುನರ್ ಕಾರನ್ನ ಸಹ ವಶಕ್ಕೆ ಪಡೆದಿದ್ದು ಕಾರಿನ ಡಿಕ್ಕಿಯಲ್ಲಿದ್ದ ದಾಖಲೆಗಳನ್ನ ಪರಿಶೀಲಿಸಿದ್ದಾರೆ.
ಹೂಡಿಕೆದಾರರಿಗೆ ವಂಚನೆ ಮಾಡಿ ದೇಶಬಿಟ್ಟು ಪರಾರಿಯಾಗಿರುವ ಮನ್ಸೂರ್ ಖಾನ್ ಜೂನ್ 8 ರಂದು ಮುಜಾಹಿದ್ದೀನ್ ನನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳೀ ಭೇಟಿಯಾಗಿದ್ದ. ಈ ವೇಳೆ ಇಬ್ಬರು ಐದು ನಿಮಿಷಗಳ ಕಾಲ ಮಾತನಾಡಿದ್ದರು ಎನ್ನಲಾಗಿದೆ.
ಇನ್ನು ಮನ್ಸೂರ್ ಖಾನ್ ದೇಶ ಬಿಟ್ಟು ಹೋಗುವ ಬಗ್ಗೆ ಮುಜಾಹೀದ್ದೀನ್ ಗೆ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಿರಲಿಲ್ಲ. ಹೀಗಾಗಿ ಎಸ್ ಐಟಿ ಅಧಿಕಾರಿಗಳು ಮುಜಾಹಿದ್ದೀನ್ ನಿವಾಸದ ಮೇಲೆ ದಾಳಿ ನಡೆಸಿದ್ದು ಮುಜಾಹಿದ್ದೀನ್ ನನ್ನ ವಶಕ್ಕೆ ಪಡೆದಿದ್ದಾರೆ.
Key words: SIT-attacks IMA- Director -Mujahideen –house-Inspection.