ಮೈಸೂರು,ಸೆಪ್ಟೆಂಬರ್,16,2020(www.justkannada.in) : ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಸೇರಿದಂತೆ ಇತರರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಶಾಂತಿಯುತ, ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಅಪರಾಧಗಳನ್ನಾಗಿಸುವ ಕೇಂದ್ರ ಸರಕಾರ ಮತ್ತು ದೆಹಲಿ ಪೊಲೀಸರ ಕ್ರಮ ಖಂಡನೀಯ. ದೆಹಲಿ ಕೋಮು ಗಲಭೆಗೆ ಈ ನಾಯಕರನ್ನು ಹೊಣೆ ಮಾಡುವ ತಂತ್ರದ ಭಾಗವಾಗಿ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಉಮರ್ ಖಾಲಿಬ್ ಅವರನ್ನು ಬಿಜೆಪಿಯ ಕೇಂದ್ರ ಸರಕಾರದ ನಿರ್ದೇಶದನದಂತೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೂರಕ ಚಾರ್ಜ್ ಶೀಟ್ ನಲ್ಲಿ ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚುರಿ, ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್, ಆರ್ಥಿಕ ತಜ್ಞೆ ಜಯಂತಿ ಘೋಷ್. ಸಿನಿಮಾ ನಿರ್ಮಾಪಕ ರಾಹುಲ್ ರಾಯ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ರಾವಣ್ ಅವರ ಹೆಸರನ್ನು ಸೇರಿಸಿರುವುದು ಸರಿಯಲ್ಲ ಎಂದು ಕೋರಿದರು.
ದ್ವೇಷ ಮಾಡಿ, ಪಕ್ಷಪಾತಿ ಧೋರಣೆಯನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ. ಇದು ಸರಕಾರದ ಜನ ವಿರೋಧಿ ನೀತಿಯಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕ ಕೆ.ಬಸವರಾಜು, ಶಬ್ಭೀರ್ ಮುಸ್ತಫ, ಶೇಷಾದ್ರಿ, ಜಗನ್ನಾಥ್, ಜಯರಾಂ, ಜಗದೀಶ್, ರಾಮು, ಚಂದ್ರಶೇಖರ್ ಇತರರು ಇದ್ದರು.
key words : Sitaram-Yogendra-Yadav-Protest-protesting-filing-false-lawsuit