ಬೆಂಗಳೂರು,ಜ,17,2020(www.justkannada.in): ಬೆಂಗಳೂರಿನ ಟೌನ್ ಹಾಲ್ ಬಳಿ ಸಿಎಎ ಪರ ರ್ಯಾಲಿ ವೇಳೆ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಎಸ್ ಡಿಪಿಐನ ಆರುಮಂದಿ ಕಾರ್ಯಕರ್ತರು ಪ್ಲಾನ್ ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಸಿಎಎ ಪರವಾಗಿ ಟೌನ್ ಹಾಲ್ ಬಳಿ ಸಮಾವೇಶ ಆಯೋಜಿಸಲಾಗಿತ್ತು. ಹಲವು ಮುಖಂಡರು ಈ ಸಮಾವೇಶದಲ್ಲಿ ಸಿಎಎ ಪರ ಭಾಷಣ ಮಾಡಿದ್ದರು. ಸಿಎಎ ಪರ ಭಾಷಣ ಮಾಡಿದ ಮುಖಂಡರ ಹತ್ಯೆಗೆ ಎಸ್ ಡಿಪಿಐನ 6 ಮಂದಿ ಕಾರ್ಯಕರ್ತರು ಪ್ಲಾನ್ ರೂಪಿಸಿದ್ದರು. ಪೊಲೀಸ್ ಬಿಗಿಭದ್ರತೆ ಇದ್ದ ಹಿನ್ನೆಲೆ ಪ್ಲಾನ್ ಫ್ಲಾಪ್ ಆಗಿತ್ತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಭಾಸ್ಕರ್ ರಾವ್, ಸಮಾವೇಶದಲ್ಲಿ ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ್ದರು. ರ್ಯಾಲಿವೇಳೆ ಏಳು ಕಲ್ಲುಗಳನ್ನ ಸಹ ತೂರಲಾಗಿತ್ತು. ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ವರುಣ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ತುರ್ತು ಚಿಕಿತ್ಸೆಯಿಂದ ವರುಣ್ ಬದುಕಿದ್ದಾನೆ. ಹಲ್ಲೆ ನಡೆಸಿದ್ದವರು ಎಸ್ ಡಿಪಿಐ ಕಾರ್ಯಕರ್ತರಾಗಿದ್ದು ಆರು ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇರ್ಫಾನ್, ಸೈಯದ್ ಅಕ್ಬರ್ ,ಸನಾ, ಸೈಯದ್ ಸಿದ್ದಿಕ್, ಅಕ್ಬರ್ ಪಾಷಾ, ಸಾಧಿಕ್ ಉಲ್ಲಾ ಬಂಧಿತ ಆರೋಪಿಗಳು. ಸಿಸಿಟಿವಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ ಕೋಮುಗಲಭೆ ಸೃಷ್ಠಿಸುವವರ ವಿರುದ್ದ ಕ್ರಮ ಜರುಗಿಸುತ್ತೇವೆ. ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಲು ನಿರ್ಧರಿಸುತ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಟೌನ್ ಹಾಲ್ ಬಳಿ ಸಿಎಎ ಪರ ನಡೆದಿದ್ದ ರ್ಯಾಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ, ಸಂಸದ ಪಿ.ಸಿ ಮೋಹನ್, ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದರು.
Key words: Sketch –murder- CAA-support- leaders –arrest-six-accused