ಬೆಂಗಳೂರು,ಡಿಸೆಂಬರ್,1,2021(www.justkannada.in): ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೇಚ್ ಹಾಕಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂದ ಸಿಸಿಬಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣ ಎಂಬುವವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಎಸ್.ಆರ್ ವಿಶ್ವನಾಥ್ ಬಗ್ಗೆ ಗೋಪಾಲಕೃಷ್ಣ ಮಾತನಾಡಿದ್ಧನ್ನ ಕುಳ್ಳದೇವರಾಜ್ ಸ್ಟಿಂಗ್ ವಿಡಿಯೋ ಮಾಡಿದ್ದನು. ಇದರಲ್ಲಿ ಎಸ್.ಆರ್ ವಿಶ್ವನಾಥ್ ಅವರ ವಿರುದ್ಧ ಗೋಪಾಲಕೃಷ್ಣ ಮಾತನಾಡಿದ್ದನು. ಈ ವಿಡಿಯೋ ಮೂಲಕ ಶಾಸಕ ಎಸ್.ಆರ್ ವಿಶ್ವನಾಥ್ ಗೆ ಹತ್ತಿರವಾಗಲು ಕುಳ್ಳದೇವರಾಜ್ ಯತ್ನಿಸಿದ್ದ ಎನ್ನಲಾಗಿದೆ.
ಈ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಎಸ್.ಆರ್ ವಿಶ್ವನಾಥ್ ಸೂಚಿಸಿದ್ಧರು. ಈ ಹಿನ್ನೆಲೆಯಲ್ಲಿ ಇಬ್ಬರನ್ನ ಸಿಸಿಬಿ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತೇನೆ. ಎಸ್.ಆರ್ ವಿಶ್ವನಾಥ್ ಜೊತೆ ಮಾತಾಡುತ್ತೇನೆ. ವಿಶ್ವನಾಥ್ ಹೇಳಿಕೆ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Key words: Sketch -murder -MLA Vishwanath -CM -Basavaraja Bommai – information – legal.
ENGLISH SUMMARY…
Plan to kill Vishwanath…? CM Bommai says will collect information and initiate action
Bengaluru, December 1, 2021 (www.justkannada.in): The news of a plan to kill Yelahanka BJP MLA S.R. Vishwanath has come to light. It has come to light after the CCB police took two persons named Kulla Devaraja and Gopalakrishna into custody and inquired them.
Kulla Devaraj had made a sting video of what Gopalakrishna had spoken about S.R. Vishwanath. In the video, Gopalakrishna has allegedly spoken against S.R. Vishwanath. It is also learned that Kulla Devaraj had attempted to grow closer to the MLA S.R. Vishwanath through this video.
Following this, the MLA had asked the police to initiate action against them. As a result of that, the CCB police took both of them into custody and are investigating.
In his response to this matter, the Chief Minister Basavaraj Bommai today informed that he will collect relevant information from the officials concerned, and also speak with S.R. Vishwanath. “We will take legal action against the culprits after getting the statement from S.R. Vishwanath,” he said.
Keywords: Yelahanka BJP MLA/ S.R. Vishwanath/ plan to kill/ Chief Minister