ಮೈಸೂರು,ನವೆಂಬರ್,11,2022(www.justkannada.in): ಸಾಹಿತಿ ಎಸ್.ಎಲ್ ಭೈರಪ್ಪ ಸೇರಿ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿಯನ್ನ ನೀಡಲು ತಜ್ಞರ ಸಮಿತಿ ನಿರ್ಧರಿಸಿದೆ.
ಮೈಸೂರು ವಿಶ್ವವಿದ್ಯಾನಿಲಯವು 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ಇದರ ಸವಿನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಶತಮಾನೋತ್ಸವ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಯನ್ನು ನೀಡುತ್ತಿದೆ.
2022ರ ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಗಳನ್ನು ಈ ಕೆಳಕಂಡ ಮಹನೀಯರುಗಳಿಗೆ ನೀಡಲು ತಜ್ಞರ ಸಮಿತಿಯು ತೀರ್ಮಾನಿಸಿದೆ.
- ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ಸಾಮಾಜಿಕ ವಿಜ್ಞಾನ ಶತಮಾನೋತ್ಸವ ಪದವಿ – ಪ್ರೊ. ಎಸ್.ಎಲ್. ಭೈರಪ್ಪ, ಖ್ಯಾತ ಸಾಹಿತಿಗಳು, ಮೈಸೂರು.
- ಮೈಸೂರು ವಿಶ್ವವಿದ್ಯಾನಿಲಯ ಸರ್ ಎಂ. ವಿಶ್ವೇಶ್ವರಯ್ಯ ನಾವೀನ್ಯ ತಂತ್ರಜ್ಞಾನ ಶತಮಾನೋತ್ಸವ ಪದವಿ ಪ್ರೊ. ಎಸ್. ಸಡಗೋಪನ್, ಸಂಸ್ಥಾಪಕ ನಿರ್ದೇಶಕರು, ಐಐಐಟಿ, ಬೆಂಗಳೂರು.
- ಮೈಸೂರು ವಿಶ್ವವಿದ್ಯಾನಿಲಯದ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ಶತಮಾನೋತ್ಸವ ರು ಪ್ರೊ, ಕೆ.ಎಸ್. ರಂಗಪ್ಪ, ವಿಶ್ರಾಂತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಖ್ಯಾತರಾಗಿರುವಂತಹ ಮಹನೀಯರುಗಳಿಗೆ ನೀಡುವಂತದ್ದಾಗಿದೆ.
Key words: SL Bhairappa – KS Rangappa – awarded – Mysore University -Bharat Ratna.