ಹಾವುಗಳ ಮಿಲನ ಮಾಸ: ಎಚ್ಚರಿಕೆಯಿಂದಿರುವಂತೆ ಜನತೆಗೆ ಸ್ನೇಕ್ ಶ್ಯಾಮ್ ಮನವಿ

ಮೈಸೂರು,ಡಿಸೆಂಬರ್,13,2024 (www.justkannada.in): ಪ್ರಸಕ್ತ ಸಂದರ್ಭ, ಪ್ರಸಕ್ತ ಮಾಸ ಹಾವುಗಳ ಮಿಲನಮಾಸವಾಗಿದ್ದು ಎಲ್ಲೆಡೆ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತವೆ. ಅದರಲ್ಲೂ ಮಂಡಲದ ಹಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಉರಗತಜ್ಞ  ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

ಈ ಕುರಿತು ಜನತೆಗೆ ಸಂದೇಶ ರವಾನಿಸಿರುವ ಸ್ನೇಕ್ ಶ್ಯಾಮ್, ಸುಬ್ರಹ್ಮಣ್ಯ ಷಷ್ಠಿ ಬಂತೆಂದರೆ ಜನರು ಸುಬ್ರಹ್ಮಣ್ಯಸ್ವಾಮಿಗೆ, ನಾಗರ ಕಲ್ಲಿಗೆ ಹಾಲಿನ ಮೂಲಕ ತನಿ ಎರೆದು ಪೂಜೆ ಮಾಡುವ ಪದ್ದತಿಯನ್ನ ಸಾವಿರಾರು ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಜನರಲ್ಲಿ ನಂಬಿಕೆ.  ಜನರಲ್ಲಿ ಷಷ್ಠಿ ಹತ್ತಿರವಾಗುತ್ತಿದ್ದಂತೆ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ನಂಬಿಕೆ ಇದೆ. ಶತಮಾನಗಳಿಂದಲೂ ಕೂಡ ಈ ನಂಬಿಕೆ ಇರುವಂತದ್ದನ್ನ ಗಮನಿಸಬಹುದಾಗಿದೆ

ಹಾವುಗಳು ಮಿಲನವಾಗುವ ಸಮಯದಲ್ಲಿ ಒಂದು ಹೆಣ್ಣು ಹಾವಿಗೆ ಹಲವು ಗಂಡು ಹಾವುಗಳು ಮಿಲನವಾಗಲು ಸ್ಪರ್ಧೆ ಒಡ್ಡುತ್ತವೆ. ಈ ಸ್ಪರ್ಧೆಯಲ್ಲಿ ಗಂಡು ಹಾವುಗಳು ಮುಖಾಮುಖಿಯಾಗಿ ಉಂಟಾಗುವ ಘರ್ಷಣೆ ಆಥವ ಜಗಳದಲ್ಲಿ ಯಾವ ಗಂಡು ಹಾವು ಗೆಲ್ಲುತ್ತದೂ ಆ ಗಂಡು ಹಾವು ಹೆಣ್ಣು ಹಾವಿನೊಂದಿಗೆ ಸಹಜವಾಗಿ ಮಿಲನ ಪ್ರಕ್ರಿಯೆ ನಡೆಸಲು ಮುಂದಾಗುವ ಪದ್ದತಿಯನ್ನ  ನಾವು ಹಾವುಗಳ ಸಂತತಿಯಲ್ಲಿ ಕಾಣಬಹುದು ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ವರೆಗೆ ಹಾವುಗಳು ಎಲ್ಲೆಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಸಹಜವು ಕೂಡ  ಹೌದು. ಅದ್ದರಿಂದ ಈ ಸಮಯದಲ್ಲಿ ಮಂಡಲದ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುವುತ್ತಿರುವುದರಿಂದ ಜನರು ಅತ್ಯಂತ ಜಾಗರೂಕರಾಗಿರಬೇಕು ಮಂಡಲದ ಹಾವನ್ನ ಕೆಲವರು ಹೆಬ್ಬಾವು ಎಂದು ತಪ್ಪಾಗಿ ಅರ್ಥೈಸಿಕೊಂಡು ಅದನ್ನ ಹಿಡಿಯಲು ಹೋಗಿ ಅನಾಹುತವನ್ನ ಮೈ ಮೇಲೆ ಎಳೆದುಕೊಳ್ಳುವಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಡೆದಿದೆ.  ಎರಡು ತಿಂಗಳಿನಲ್ಲಿ ಮೈಸೂರಿನಲ್ಲಿ  20 ರಿಂದ 30 ಮಂಡಲದ ಹಾವನ್ನ ರಕ್ಷಣೆ ಮಾಡಲಾಗಿದ್ದು ಆ ಮೂಲಕ ಜನರಲ್ಲಿ ಒಂದು ಎಚ್ಚರಿಕೆಯ ಸಂದೇಶವನ್ನ ಅವುಗಳು ಸಂತತಿ ನೀಡುತ್ತಿವೆ ಎಂದು ಬಾವಿಸಬಹುದು.

ಹಾಗೆಯೇ ಕಾರು ಹತ್ತುವಾಗ ಅಥವಾ ಇಳಿಯುವಾಗ, ಚಪ್ಪಲಿ ಆಥವ ಶೂ ಹಾಕಿಕೊಳ್ಳುವಾಗ, ಸಂಜೆ ಮೇಲೆ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಅತ್ಯಂತ ಜಾಗರುಕತೆಯಿಂದ ಇದ್ದರೆ ಒಳ್ಳೆಯದು.  ಅದರಲ್ಲೂ ಹಾವಿನ ‌ಕಡೆತಕ್ಕೆ ಒಳಗಾಗುವವರಲ್ಲಿ ಹೆಚ್ಚಾಗಿ ರೈತರು ಹಾಗು ಕೂಲಿ ಕಾರ್ಮಿಕರು ಇರುವುದರಿಂದ ಈ ಎರಡು ವರ್ಗ  ಎಚ್ಚರಿಕೆಯ ಕ್ರಮ ಕೈಗೂಳ್ಳುವ ಅಗತ್ಯವಿದೆ.  ಅವರು ಕೆಲಸ ಮಾಡುವಾಗ ಹೊಲ ಗದ್ದೆಗಳಿಗೆ ಹೋಗುವಾಗ ಗಮ್ ಬೂಟ್ಟನ್ನ ಬಳಸಿದರೆ ಸುರಕ್ಷಿತವಾಗಿರಬಹುದು.  ಜನರು ತಾವು ಬಳಸುವ ಚಪ್ಪಲಿ ಹಾಗೂ ಶೂಗಳನ್ನ ಮನೆಯ ಹೊರಗೆ ಇಡುವ ಬದಲು ಮನೆಯ ಒಳಗೆ ಇಟ್ಟರೆ ಉತ್ತಮ .ಅಲ್ಲದೆ ಮನೆಯ ಹಿಂಭಾಗ ಅಥವ ಮುಂಭಾಗ ರಾತ್ರಿ ವೇಳೆ ಹೆಚ್ಚು  ಬೆಳಕು ಬರುವ ಪ್ರಕಾಶಮಾನವಾದ ದೀಪವನ್ನ ಅಳವಡಿಸಿಕೊಳ್ಳುವುದು ಉತ್ತಮ  ಎಂದು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.

ಮೈಸೂರು ನಗರ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ ಮಂಡಲದ ಹಾವಿನ ಕಡಿತಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಎಲ್ಲೆಡೆ ಮಂಡಲದ ಹಾವು ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಜಾಗರೂಕರಾಗಿರಬೇಕು ಎಂದು ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

Key words: Snake, month,  Snake Shyam, people, Be careful