ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟರೆ ಹೋರಾಟ ನಿಶ್ಚಿತ- ಸ್ನೇಹಮಯಿ ಕೃಷ್ಣ.

ಮೈಸೂರು,ಜನವರಿ,2,2024 (www.justkannada.in):  ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟರೆ ಹೋರಾಟ ನಿಶ್ಚಿತ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಇಂದು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ರಸ್ತೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟರೇ ಹೋರಾಟ  ಮಾಡುತ್ತೇವೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೇ ಹೋರಾಟ ನಿಶ್ಚಿತ ಯಾವುದೇ ಕಾರಣಕ್ಕೂ ಆ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಬಾರದು ಎಂದರು.

ಆ ರಸ್ತೆಗೆ ಪ್ರಿನ್ಸೆಸ್ ಹೆಸರಿದೆ. ಹೀಗಾಗಿ ಹೆಸರು ಬದಲಾವಣೆ ಬೇಡ.  ಸಿದ್ದರಾಮಯ್ಯ ಹೆಸರು ಇಡುವುದು ಬೇಡ ಎನ್ನುತ್ತಿಲ್ಲ. ಈಗಾಗಲೇ ಆ ರಸ್ತೆಗ ಪ್ರಿನ್ಸಿಸ್  ಹೆಸರಿದೆ ಬೇಕಾದರೆ ಸಿದ್ದರಾಮಯ್ಯ ಹೆಸರನ್ನ ಬೇರೆ ರಸ್ತೆಗೆ ಇಡಿ ಅದರೆ ಇತಿಹಾಸ ಪ್ರಸಿದ್ದ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ ಎಂದರು.

Key words:  road, Name,  CM Siddaramaiah, Snehamayi Krishna.