ಬೆಂಗಳೂರು, ಫೆಬ್ರವರಿ 12, 2023 (www.justkannada.in): ಹಿಮಾಚಲ ಪ್ರದೇಶದಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಹಲವು ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತವಾಗಿದೆ.
ಹಲವು ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ನೂರಾರು ಪ್ರವಾಸಿಗರು ಹಿಮಪಾತದಲ್ಲಿ ಸಿಕ್ಕಿಕೊಂಡಿದ್ದಾರೆ. ರಸ್ತೆ ಮೇಲೆ ಬಿದ್ದ ಹಿಮವನ್ನು ತೆಗೆಯಲು ಸಾಧ್ಯವಾಗದೆ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.
ಹಿಮಪಾತದೊಂದಿಗೆ ಮಳೆ ಕೂಡ ಮುಂದುದಿದ್ದು ಪ್ರವಾಸಿಗರು ಆತಂಕದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಲಾಹೌಲ್, ಸ್ಪಿತಿ, ಶಿಮ್ಲಾ, ಕುಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಅಧಿಕ ಹಿಮಪಾತ ದಾಖಲಾಗಿದೆ.
ಹಿಮಾಚಲದಲ್ಲಿ ಹಿಮಪಾತದಿಂದಾಗಿ ಹಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಟ್ಟು 216 ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಮಳೆ ಮತ್ತು ಹಿಮಪಾತದ ನಡುವೆ, ಹಿಮಾಚಲದ ಹಲವು ಪ್ರದೇಶಗಳಲ್ಲಿ ತಾಪಮಾನ ಭಾರೀ ಕುಸಿಯುತ್ತಿದೆ. ಇಡೀ ರಾಜ್ಯದಲ್ಲಿ ಚಳಿಯ ಅಬ್ಬರ ಕಂಡು ಬರುತ್ತಿದೆ.