ಮೈಸೂರು,ಜನವರಿ,23,2021(www.justkannada.in) : ಸಾಮಾಜಿಕ ಪರಿವರ್ತನೆಗೆ ಶಿಕ್ಷಣವು ಅತ್ಯಂತ ಶಕ್ತಿಯುತ ಅಸ್ತ್ರವಾಗಿದೆ. ಸಂಪನ್ಮೂಲ ವಂಚಿತ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅವರನ್ನು ಗುರುತಿ, ಪ್ರೋತ್ಸಾಹಿಸಬೇಕಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.ಸುಜೀವ್ ಸಂಸ್ಥೆ ವತಿಯಿಂದ “ಸ್ಮಾರ್ಟ್ ಕ್ಯಾಂಪೇನ್” ಅಡಿಯಲ್ಲಿ ಕುಂಬಾರಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸುಜೀವ್ ಸಂಸ್ಥೆಯ ರಾಜಾರಾಮ್ ಮಾತನಾಡಿ, ಸುಜೀವ್ ಸಂಸ್ಥೆಯು ಸರ್ಕಾರಿ ಶಾಲೆಗಳು ಮತ್ತು ದೀನದಲಿತ ವಿದ್ಯಾರ್ಥಿಗಳ ಸುಧಾರಣೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲೆಯ ಕಂಪ್ಯೂಟರ್ ಪ್ರಯೋಗಾಲಯಕ್ಕೆ 15 ಕ್ಕೂ ಹೆಚ್ಚು ಕಂಪ್ಯೂಟರ್ ಗಳನ್ನು ರಿಪೇರಿ ಮಾಡುವ ಮೂಲಕ ಮತ್ತು ಹೊಸ ಕಂಪ್ಯೂಟರ್ ಒಂದನ್ನು ದಾನವಾಗಿ ನೀಡಲಾಗಿದೆ ಎಂದರು.ಶಾಲೆಯ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಗಳನ್ನು ವಿತರಣೆಯೊಂದಿಗೆ, ಶಾಲೆಯಲ್ಲಿ ನವೀಕರಿಸಿದ ಕಂಪ್ಯೂಟರ್ ತರಗತಿಯನ್ನು ಉದ್ಘಾಟಿಸಲಾಯಿತು. ಇದಲ್ಲದೆ ಆರ್ ಓ ವಾಟರ್ ಪ್ಲಾಂಟ್ ಸ್ಥಾಪನೆಗೆ ಸಹಾಯ ಮಾಡುವುದರ ಜೊತೆಗೆ ಶಾಲೆಗೆ 15 ಕುರ್ಚಿಗಳನ್ನು ದಾನ ಮಾಡಿದೆ ಎಂದು ಹೇಳಿದರು.
ಸುವ ಸರ್ಕಾರಿ ಶಾಲೆಗಳಿಗೆ ಬಲಪಡಿಸುವ ಸಲುವಾಗಿ , ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕ ವರ್ಗ ಮತ್ತು ಸುಜೀವ್ ಸಂಸ್ಥೆಯ ತಂಡದ ಸದಸ್ಯರು ಉಪಸ್ಥಿತರಿದ್ದರು.
key words : Social-conversion-Education-powerful-Weapon-
Former MLA-M.K.Somashekhar