ಮೈಸೂರು,ಫೆಬ್ರವರಿ,14,2021(www.justkannada.in) : ಹುಟ್ಟು ಸಾವಿನ ಮಧ್ಯೆ ಸಮಾಜ ಗುರುತಿಸುವಂತಹ ಕೆಲಸ ಮಾಡಬೇಕು ಎಂದು ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.
ಮೈಸೂರಿನ ಶ್ರೀ ಯೋಗಿ ನಾರಾಯಣ ಬಣಜಿಗ ಸಂಘದ ಆವರಣದಲ್ಲಿ ನಿವೃತ್ತ ಕೃಷಿ ಅಧಿಕಾರಿಯಾಗಿ ಮತ್ತು ಸಂಘದ ನಿರ್ದೇಶಕರಾಗಿ ಸಾರ್ಥಕ ಸೇವೆ ಸಲ್ಲಿಸಿದ ಚಂದ್ರಶೇಖರಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಬಹಳಷ್ಟು ಮಂದಿ ತಮ್ಮ ನಿವೃತ್ತಿ ನಂತರ ಯಾವುದೇ ಚಟುವಟಿಕೆಗಳಲ್ಲಿ ತೊಡಗದೇ ತಮ್ಮ ಪಾಡಿಗೆ ಇರುತ್ತಾರೆ. ಇದು ಆರೋಗ್ಯಪೂರ್ಣ ಸಮಾಜದ ಲಕ್ಷಣವಲ್ಲ. ತಾವು ಸಂಪಾದಿಸಿದ ಅನುಭವವನ್ನು ಇತರಿಗೆ ಮಾರ್ಗದರ್ಶನ ಮಾಡಿ ಸಮಾಜಮುಖಿ ಕೆಲಸ ಮಾಡಿದಾಗ ತಾವು ಮನುಷ್ಯನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎನ್.ನಾರಾಯಣ್ ಮಾತನಾಡಿ, ಸಮಾಜದ ಏಳಿಗೆಗೆ ಬಹಳಷ್ಟು ಮಂದಿ ಸೇವೆಸಲ್ಲಿಸಿದ್ದಾರೆ. ಅವರಲ್ಲಿ ಡಿ.ಬಿ. ಚಂದ್ರಶೇಖರಯ್ಯ ಅವರು ಒಬ್ಬರಾಗಿದ್ದಾರೆ. ಅತ್ಯಂತ ಕ್ರಿಯಾಶೀಲತೆಯಿಂದ ಸಮಾಜದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಸ್ಮರಿಸಿಕೊಂಡರು.ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಡಿ.ನಾಗರಾಜು, ನಿರ್ದೇಶಕ ಕೆ.ಚಂದ್ರಶೇಖರ್ , ಹೆಚ್.ಕೆ.ಜಗನ್ನಾಥ್, ಡಾ.ಟಿ.ರಮೇಶ್, ನಿಲಯ ಪಾಲಕರ ನಾಗರಾಜಯ್ಯ ವ್ಯವಸ್ಥಾಪಕ ಎಚ್.ಆರ್.ವೆಂಕಟೇಶ್ ಇತರರು ಭಾಗವಹಿಸಿದ್ದರು.
key words : Society-Such-identifying-Work-Must do-Mylak-Former-President-H.A.Venkatesh