ಚಾಮರಾಜನಗರ.ಡಿ 26,2019(www.justkannada.in): ಗ್ರಹಣದಿಂದ ಕೇಡಾಗುತ್ತದೆಂದು ಮನೆಯ ಮುಂದೆ ತಟ್ಟೆ ತುಂಬಾ ನೀರು ತುಂಬಿ ಒನಕೆ ನಿಲ್ಲಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಉಗಿನೀಯಾ ಗ್ರಾಮದಲ್ಲಿ ನಡೆದಿದೆ.
ಈ ಕಂಕಣ ಸೂರ್ಯಗ್ರಹಣದಿಂದ ಕೇಡಾಗುತ್ತದೆ ಎಂಬ ವದಂತಿ ಹರಿದಾಡಿದ ಪರಿಣಾಮ ಗ್ರಾಮದಲ್ಲಿ ಪ್ರತಿ ಮನೆ ಮನೆಯಲ್ಲೂ ತಟ್ಟೆ ತುಂಬಾ ನೀರು ತುಂಬಿ ಒನಕೆ ನಿಲ್ಲಿಸಿದ್ದರು. ಗ್ರಾಮದ ಯಜಮಾನರು, ಹಿರಿಯರಾದ ರಾಚೇಗೌಡರವರ ಮಗ ಬಾಳೆಕಾಯಿ ಕುಮಾರ ಮತ್ತು ಸೊಸೆ ಸವಿತಾ ಈ ಪ್ರಯೋಗ ಮಾಡಿದ್ದು ಗ್ರಾಮದ ಹಲವರು ಅವರನ್ನು ಅನುಸರಿಸಿದ್ದರು.
ಗ್ರಹಣದ ವೇಳೆ ಜನರು ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು ಎನ್ನಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವೇಳೆ ಆಹಾರ ಸೇವಿಸಿದರೆ ದೋಷಗಳು ನಮ್ಮನ್ನ ಆವರಿಸುತ್ತವೆ ಎನ್ನಲಾಗಿದೆ. ಹಾಗೇ ವಿಜ್ಞಾನದ ಪ್ರಕಾರ ಈ ವೇಳೆ ಆಹಾರದಲ್ಲಿ ಸೂರ್ಯನ ವಿಕಿರಣ ಬಿದ್ದು ಅದು ವಿಷವಾಗುವ ಕಾರಣ ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ.
ಆದ ಕಾರಣ ಇಂದು ಗ್ರಹಣದ ವೇಳೆ ನೀರು ಕುಡಿಯುವಾಗ ನೀರಿಗೆ ದರ್ಭೆ ಹುಲ್ಲುಗಳನ್ನು ಹಾಕಿದ್ದು, ಯಾವುದೇ ಕೆಟ್ಟ ಪರಿಣಾಮ ಬೀರುತ್ತದೆಂದು ಮಕ್ಕಳಿಗೆ ಕಾಲುಗಳಿಗೆ ದರ್ಭೆ ಕಟ್ಟಿರುವ ಘಟನೆ ನಗರದ 5ನೇ ವಾರ್ಡ್ ನ ಶಂಕನಪುರದಲ್ಲೂ ನಡೆದಿದೆ.
Key words: solar eclipse- kollegal- villagers – house –pestle