ನವದೆಹಲಿ,ಅಕ್ಟೋಬರ್,25,2022(www.justkannada.in): ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಗೋಚರವಾಗಿದ್ದು, ಈ ಬಾರಿಯ ದೀಪಾವಳಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ ಸಂಭವಿಸಿದೆ.
ಭಾರತದಲ್ಲಿ ಮೊದಲಿಗೆ ಪಂಜಾಬ್ ನ ಅಮೃತಸರದಲ್ಲಿ4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಗಿದೆ. ಹಾಗೆಯೇ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಂಜೆ 4.29ಕ್ಕೆ ಗ್ರಹಣ ಗೋಚರವಾಗಿದೆ.
ವಿಶಾಖ ಪಟ್ಟಣಂ, ಜಮ್ಮುಕಾಶ್ಮೀರ, ರಾಂಚಿ, ನೋಯ್ಡಾ, ಲಕ್ನೋ, ಜೈಪುರ, ಪಾಟ್ನಾದಲ್ಲೂ ಗ್ರಹಣ ಗೋಚರಿಸಿದೆ. ಅಬುಧಾಬಿ ಲಡಾಖ್ ನಲ್ಲಿ ಸೂರ್ಯಗ್ರಹಣ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕಲ್ಬುರ್ಗಿ,ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗದಲ್ಲಿ ಗ್ರಹಣ ಗೋಚರಿಸಿದೆ.
ಇನ್ನು ಸೂರ್ಯಗ್ರಹಣ ಹಿನ್ನೆಲೆ ದೇಶದಲ್ಲಿ ರಾಜ್ಯದಲ್ಲಿ ಹಲವು ದೇವಸ್ಥಾನಗಳು ಬಂದ್ ಆಗಿದ್ದು, ಸಂಜೆ 7 ಗಂಟೆ ಬಳಿಕ ತೆರೆಯಲಿವೆ. ಸೂರ್ಯಗ್ರಹಣ ಹಿನ್ನೆಲೆ ಬೆಂಗಳೂರಿನಲ್ಲಿ ಜನರ ಓಡಾಟ ಕೊಂಚ ಕಡಿಮೆಯಾಗಿದೆ.
Key words: solar eclipse – visible -many cities – country.