ಮೈಸೂರು,ಜೂನ್,29,2022(www.justkannada.in): ಸೋಲಾರ್ ಪವರ್ ಪ್ರಾಜೆಕ್ಟ್ ಗಳನ್ನು ಸಾರ್ವಜನಿಕರಿಗೆ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿಗಳನ್ನು ತಮ್ಮ ಸಂಸ್ಥೆಗಳ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಸಂಬಂಧ ಮೈಸೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ಮೈಸೂರು ನಗರದ ಸಿಸಿಬಿ ಘಟಕದಲ್ಲಿ ತನಿಖೆ ನಡೆಸಲಾಗುತ್ತಿದೆ. ನಗರದ ವ್ಯಾಪ್ತಿಯಲ್ಲಿ ಸೋಲಾರ್ ಪವರ್ ಪ್ರಾಜೆಕ್ಟ್ ಗಳನ್ನು ಸಾರ್ವಜನಿಕರಿಗೆ ಮಾಡಿಸಿಕೊಡುವುದಾಗಿ ನಂಬಿಸಿ 1.MNRE, 2.NTPCVVNL, 3.Solar Energy Corporation, 4. M/S Anushree Greentech Solutions Private Limited, 5.M/S Dhanush Infrastructure Private Limited, 6.M/S DGFSL India, 7.M/S Dhanush Group, 8. M/S Trisha Media Entertainment Private Limited, 9.M/S Excellent Solars pvt Ltd, 10. M/S Anantha Energy Solutions Pvt Ltd, ಹಾಗೂ M/S Anantheshwara Green Energy Solutions Pvt.Ltd ಹೆಸರಿನಲ್ಲಿ ಸಂಸ್ಥೆಗಳನ್ನ ತೆರೆದು ಹಲವಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಹಣವನ್ನ ತಮ್ಮ ಸಂಸ್ಥೆಗಳ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ.
ಸದರಿ ಪ್ರಕರಣಗಳ ತನಿಖಾ ಕಾಲದಲ್ಲಿ ಹಲವಾರು ಹೂಡಿಕೆದಾರರುಗಳು ಆರೋಪಿಗಳು ಸೂಚಿಸಿರುವ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿರುವ ಬಗ್ಗೆ ತಿಳಿದು ಬಂದಿದ್ದು, ಸದರಿ ಹೂಡಿಕೆದಾರರುಗಳಿಂದ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿರುವುದರಿಂದ, ವಂಚನೆಗೊಳಗಾಗಿರುವ ಹೂಡಿಕೆದಾರರು ಸಂಬಂಧಪಟ್ಟ ಸಾಕ್ಷ್ಯಾಧಾರಗಳೊಂದಿಗೆ ತನಿಖಾಧಿಕಾರಿಯಾದ ಸಿಸಿಬಿ ಘಟಕ ಎಸಿಪಿ ಅವರನ್ನು ಖುದ್ದು ಅಥವಾ ದೂರವಾಣಿ ಸಂಖ್ಯೆ 9480802207 ಸಂಪರ್ಕಿಸುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
Key words: Solar Power Project- Fraud-Notice -contact – Investigator-mysore