ತುಮಕೂರು,ಡಿಸೆಂಬರ್,30,2024 (www.justkannada.in): ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಡಾ.ಟಿ.ಬಿ.ಜಯಚಂದ್ರ ಅವರು ಇಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಂಗಾವರ ಮತ್ತು ಚಿಕ್ಕಬಾಣಗೆರೆ ಗ್ರಾಮದ ಬಳಿ ಪಿಎಂ- ಕುಸುಮ್ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ಸೋಲಾರ್ ಪಾರ್ಕ್ ವೀಕ್ಷಣೆ ಮಾಡಿ ರೈತರು ಮತ್ತು ಅಧಿಕಾರಿಗಳ ಜೊತೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ .ಜಾರ್ಜ್ ಮಾತನಾಡಿ, ಪಿಎಂ ಕುಸುಮ್ ಯೋಜನೆ ರೈತರ ಹಸಿರು ಭವಿಷ್ಯಕ್ಕಾಗಿ ಬದ್ಧತೆಯನ್ನು ಇಟ್ಟುಕೊಂಡಿವೆ. ರೈತರಿಗೆ ನಿರಂತರ ವಿದ್ಯುತ್ ಪ್ರವೇಶದೊಂದಿಗೆ ಅಧಿಕಾರ ನೀಡುತ್ತದೆ. ಸರ್ಕಾರ ನವೀಕರಿಸಬಹುದಾದ ಇಂಧನ ಪ್ರಮಾಣದಲ್ಲಿ ಅತ್ಯಗತ್ಯ ಹೆಜ್ಜೆ ಪಿಎಂ ಕುಸುಮ್ ಯೋಜನೆ ಇಟ್ಟಿದೆ. ಈ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ವಿದ್ಯುತ್ 2299 ಕೃಷಿ ಪಂಪ್ ಸೆಟ್ ಗಳಿಗೆ ವಿಶ್ವಾಸ ಅರ್ಹ ಶಕ್ತಿಯನ್ನು ಒದಗಿಸುತ್ತದೆ. ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇಂತಹ ಯೋಜನೆಗಳು ರೈತರನ್ನು ಸಬಲಗೊಳಿಸುತ್ತವೆ. ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಶಿರಾ ನಗರಸಭೆ ಅಧ್ಯಕ್ಷ ಜೀಶಾನ್ ಮೂಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ನಗರಸಭೆ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಸದಸ್ಯರಾದ ಅಜಯ್ ಕುಮಾರ್ ,ಮಹಮ್ಮದ್ ಜಾಫರ್, ಶಿವಶಂಕರ್, ಅಜಯ್ ಕುಮಾರ್, ಫಯಾಜ್ ಖಾನ್, ನೂರುದ್ದೀನ್, ಬೆಸ್ಕಾಂ ಎಇಈ ಶಾಂತರಾಜು, ಬೆಸ್ಕಾಂ ಎಸ್ಓ ಮುರಳಿದರ, ಹನುಮಂತರಾಯ, ಚಂಗಾವರ ಮತ್ತು ಚಿಕ್ಕಬಾಣಗೆರೆ ಗ್ರಾಮಗಳ ರೈತರಾದ ಸಿದ್ದಪ್ಪ, ದೊಡ್ಡಬಾಣಗೆರೆ ರಂಗನಾಥಪ್ಪ, ಸೋಮಣ್ಣ, ಕುರುಬರಾಮನಹಳ್ಳಿ ಕರಿಯಣ್ಣ ಸೇರಿದಂತೆ ರಾಮ್ ತರಂಗ ಸೆಲ್ಯೂಷನ್ ಪ್ರವೈಟ್ ಲಿಮಿಟೆಡ್ ನ ಅಧಿಕಾರಿಗಳು, ಸಿಬ್ಬಂದಿ ವರ್ಗ, ಬೆಸ್ಕಾಂ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Key words: Solar power, farmers, pump sets, Minister, K.J. George