ಬೆಂಗಳೂರು, ಸೆಪ್ಟಂಬರ್,14,2023(www.justkannada.in): ರಾಜ್ಯದಲ್ಲಿ 195 ತಾಲ್ಲೂಕುಗಳನ್ನ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮಗಳು ಬದಲಾವಣೆ ಆಗಬೇಕು ಎಂದು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗಲಿದೆ. ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮ ಬದಲಾವಣೆ ಆಗಬೇಕಿದೆ. ಬರಗಾಲದ ಮಾನದಂಡ ಬದಲಾವಣೆ ರಾಜ್ಯಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂದಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರದ ಹಣ ಕಡಿಮೆ ಇದೆ. ಕೇಂದ್ರ ಸರ್ಕಾರದ ರೂಲ್ಸ್ ಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಹಾಗಾಗಿ ಬದಲಾವಣೆ ಅವಶ್ಯಕತೆ ಇದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
Key words: Some -central -regulations – drought relief – change – Minister -Sathish Jarakiholi.