ಬೆಂಗಳೂರು,ಏಪ್ರಿಲ್,11,2025 (www.justkannada.in): ಪುತ್ರನೊಬ್ಬ ಕಬ್ಬಿಣದ ರಾಡ್ ನಿಂದ ಹೊಡೆದು ತನ್ನ ಹೆತ್ತ ತಾಯಿಯನ್ನೇ ಕೊಂದು ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬಾಗಲಕುಂಟೆಯ ಮುನೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಶಾಂತಬಾಯಿ (82) ಹತ್ಯೆಯಾದವರು. ಮಹೇಂದ್ರ ಸಿಂಗ್ ಎಂಬಾತನೇ ಕೊಲೆ ಮಾಡಿದ ಪುತ್ರ.
ಮಹೇಂದ್ರ ಸಿಂಗ್ ಕೆಲಸಕ್ಕೆ ಹೋಗದೆ ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಂದ್ರ ಸಿಂಗ್ ಹಣಕ್ಕಾಗಿ ತಾಯಿಯ ಬಳಿ ದಿನನಿತ್ಯ ಪೀಡಿಸುತ್ತಿದ್ದ. ನಿನ್ನೆ ರಾತ್ರಿ ಜಗಳವಾಗಿದ್ದು, ಕುಡಿದ ಮತ್ತಿನಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಶಾಂತಬಾಯಿ ಅವರನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಾಗಲಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Son, killed, mother, Bangalore