ಬೆಂಗಳೂರು,ಜೂನ್,3,2022(www.justkannada.in): ಮೊಬೈಲ್ ಕೊಡಿಸದಿದ್ದಕ್ಕೆ ತನ್ನ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೇಗೂರಿನ ಮೈಲಸಂದ್ರದಲ್ಲಿ ಈ ಘಟನೆ ನಡೆದಿದೆ. ತಾಯಿ ಫಾತಿಮಾ ಮೇರಿ ಪುತ್ರನಿಂದಲೇ ಕೊಲೆಯಾದವರು. ದೀಪಕ್ ಎಂಬುವವನೇ ಹತ್ಯೆಗೈದ ಮಗ. ಕಳೆದ 1 ವಾರದಿಂದ ಮೊಬೈಲ್ ಕೊಡಿಸುವಂತೆ ತಾಯಿ ಫಾತಿಮಾ ಮೇರಿಗೆ ದೀಪಕ್ ಒತ್ತಾಯಿಸುತ್ತಿದ್ದ.
ಈ ನಡುವೆ ನಿನ್ನೆ ಕೂಡ ಮೊಬೈಲ್ ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದ. ದುಡ್ಡಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ಫಾತಿಮಾ ಮೇರಿ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪುತ್ರ ದೀಪಕ್ ನಿಂದ ಕತ್ತು ಹಿಸುಕಿ ತಾಯಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Key words: son- Mother-killed –mobile-bangalore