ಕಲಬುರ್ಗಿ,ಏಪ್ರಿಲ್,11,2021(www.justkannada.in): ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಕಲ್ಬುರ್ಗಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಅಕ್ರಮ ಮರಳು ಸಾಗಾಟದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅಕ್ರಮ ಸಾಗಾಟಕ್ಕೆ 6 ಸಾವಿರ ಕೋಟಿ ರೂ ದಂಡ ಹಾಕಲಾಗಿದೆ. ಇದರಲ್ಲಿಯೂ ಅಕ್ರಮವಾಗಿರುವುದು ಗೊತ್ತಾಗಿದೆ ಅಕ್ರಮ ಗಣಿಗಾರಿಕೆ ನಿಲ್ಲುಸುವುದಕ್ಕೆ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಶೀಘ್ರವೇ ಉಚಿತ ಮರಳು ನೀತಿ ತರಲು ನಿರ್ಧರಿಸಿದ್ದೇವೆ. 10 ಲಕ್ಷದವರೆಗೆ ಒಂದು ನೀತಿ 10 ಲಕ್ಷ ಮೇಲ್ಪಟ್ಟ ಕಟ್ಟಡಕ್ಕೆ ಒಂದು ದರ ನಿಗದಿ ಮಾಡಲಾಗುತ್ತದೆ. ಇನ್ನು ಗಣಿಇಲಾಖೆ ಸಿಬ್ಬಂದಿ ಮತ್ತು ಅದಿಕಾರಿಗಳಿಗೆ ಸಮವಸ್ತ್ರ, ವಾಕಿ ಟಾಕಿ ಸೇರಿದಂತೆ ಅತ್ಯಾದುನಿಕ ಸಾಧನಗಳು ನೀಡಲು ಚಿಂತನೆ ನಡೆಸಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ತರಬೇತಿ ನೀಡಲಾಗುತ್ತದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.
Key words: Soon – new sand- policy- Minister -Murugesh Nirani.