ಮಂಡ್ಯ, ಏಪ್ರಿಲ್,24,2025(www.justkannada.in) : ಮುಸ್ಲಿಂ ಸೌಹಾರ್ದ ಒಕ್ಕೂಟವು ಕೊಡಮಾಡುವ ಪ್ರತಿಷ್ಠಿತ ‘ ಸೌಹರ್ದ ಸೇತು’ ಸಾಧಕ ವಾರ್ಷಿಕ ಪ್ರಶಸ್ತಿಗೆ ಹಿರಿಯ ಸಾಹಿತಿ ಭಾನು ಮುಸ್ತಾಕ್, ಮೈಸೂರಿನ ಹಿರಿಯ ಪತ್ರಕರ್ತ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಗಾಂಧಿವಾದಿ ಡಾ. ಸುಜಯ್ ಕುಮಾರ್ ಸೇರಿದಂತೆ ಐವರು ಆಯ್ಕೆಯಾಗಿದ್ದಾರೆ.
ನಾಗಮಂಗಲ ತಾಲೂಕು ಹೊನ್ನಾವರದ ಡಾ. ಟಿಪ್ಪು ಸುಲ್ತಾನ್, ದಸರ ಕೇಸರಿ ಪ್ರಶಸ್ತಿ ಪುರಸ್ಕೃತ ಪೈ. ಗಿರೀಶ್ ಈ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೋಮು ಸೌಹಾರ್ದತೆಗಾಗಿ ದುಡಿಯುತ್ತಿರುವ ವಿವಿಧ ಕ್ಷೇತ್ರದ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಏ.30ರಂದು ಶ್ರೀರಂಗಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಮುಸ್ಲಿಂ ಸೌರ್ಹಾದ ಒಕ್ಕೂಟದ ಗೌರವ ಅಧ್ಯಕ್ಷ ಪ್ರೊ. ಇಲಿಯಾಸ್ ಅಹಮದ್ ಖಾನ್ ತಿಳಿಸಿದ್ದಾರೆ.
ಅಂದು ನಡೆಯುವ ಮುಸ್ಲಿಂ ಸೌಹಾರ್ದ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಅಫ್ಸರ್ ವಹಿಸಲಿದ್ದಾರೆ. ಸಾಹಿತಿ ಮಂಗಳೂರು ವಿಜಯ, ಡಿವೈಎಸ್ಪಿ ಶಾಂತಮಲ್ಲಪ್ಪ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಜನಾಬ್ ಅಬ್ದುಲ್ ಬೇಗ್ ಭಾಗವಹಿಸುವರು.
Key words: ‘Souharda sethu award’, writer, Bhanu Mushtaq, journalist, K. Deepak