ಮೈಸೂರು, ಡಿಸೆಂಬರ್ 11, 2021 (www.justkannada.in): ಆಂಧ್ರಪ್ರದೇಶದ ಕರ್ನೂಲಿನ ರಾಯಲಸೀಮಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 2021-22 ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಷಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ಡಿ.14 ರಿಂದ 18ರವರೆಗೆ ಟೂರ್ನಿ ನಡೆಯಲಿದೆ. ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದ್ದು, ನಿಶಾ ಜಿ.ಜಮ್ಮನಕಟ್ಟೆ (ನಾಯಕಿ), ಕೆ.ವಿ.ಮನಸ್ವಿನಿ, ಎಂ.ಸಂಸ್ಕೃತಿ, ಕೆ.ವರ್ಷಿಣಿ ಸೋಮಣ್ಣ ಅವರು ಉತ್ತಮವಾಗಿ ಷಟಲ್ ಬ್ಯಾಡ್ಮಿಂಟನ್ ಆಡುವುದರ ಜತೆಗೆ ತಮ್ಮ ದೈಹಿಕ ಸಾಮರ್ಥ್ಯವನ್ನು ಸಾಧರ ಪಡಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತರಬೇತುದಾರ ಆರ್. ಕಿರಣ್ ಕುಮಾರ್, ತಂಡದ ವ್ಯವಸ್ಥಾಪಕಿ ಡಾ.ಗಾಯತ್ರಮ್ಮ ಜತೆ ತಮ್ಮ ತಂಡ ರಾಯಲಸೀಮಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ENGLISH SUMMARY….
UoM team selected for the South Division Inter-University Women’s Shuttle Badminton Tourney
Mysuru, December 11, 2021 (www.justkannada.in): The women’s shuttle badminton team of the University of Mysore has been selected for the South Division Inter-University Women’s Shuttle Badminton tournament 2021-22, scheduled to be held at the Rayalseema University, in Kurnool, Andhra Pradesh.
The tournament will be held from December 14 to 18. The University of Mysore, Physical Education Department, conducted the selection process at the Sports Pavilion recently, where players Nisha G. Jammakatte (Captain), K.V. Manaswini, M. Samskruti, K. Varshini Somanna exhibited good performance and got selected.
The team has already left to Rayalseema along with the trainer R. Kirankumar, team manager Dr. Gayatramma, according to information provided by Dr. P. Krishnaiah, Director, Physical Education Department, University of Mysore.
Keywords: Shuttle Badminton/ Inter-University tournament/ University of Mysore/ Women’s team selected