ಮೈಸೂರು.ಡಿಸೆಂಬರ್,31,2024 (www.justkannada.in): ದಕ್ಷಿಣ ವಲಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ ನಲ್ಲಿ ಸುಬ್ರಹ್ಮಣ್ಯ ಜೀವಾಂಶ್, ರುತ್ವಾ ಮತ್ತು ಕೃತಿಕ್ ಒಟ್ಟು 7 ಪದಕ ಪಡೆದು, ಅತ್ಯುತ್ತಮ ಪ್ರದರ್ಶನದೊಂದಿಗೆ ಮೈಸೂರಿನ ಕೀರ್ತಿ ಮೆರೆದಿದ್ದಾರೆ.
ಆಂಧ್ರಪ್ರದೇಶ ಅಮೆಚೂರ್ ಅಕ್ವಾಟಿಕ್ ಅಸೋಸಿಯೇಷನ್ ವತಿಯಿಂದ ವಿಜಯವಾಡದಲ್ಲಿ ಡಿ.27 ರಿಂದ 29 ರ ವರೆಗೆ ನಡೆದ 35ನೇ ದಕ್ಷಿಣ ವಲಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ ಶಿಪ್ 2024ರಲ್ಲಿ ಮೈಸೂರಿನ ಜಿಎಸ್ಎ ತಂಡದ ಸುಬ್ರಹ್ಮಣ್ಯ ಜೀವಾಂಶ್ 2ಚಿನ್ನ ಹಾಗೂ 1ಬೆಳ್ಳಿ, ರುತ್ವಾ 3 ಬೆಳ್ಳಿ ಮತ್ತು ಕೃತಿಕ್ 1ಕಂಚಿನ ಪದಕ ಪಡೆದಿದ್ದಾರೆ.
ಜೆ.ಪಿ.ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋಟ್ಸ್೯ ಅಸೋಸಿಯೇಷನ್ ನ ಕೋಚ್ ಪವನ್ ಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿರುವ ಸುಬ್ರಹ್ಮಣ್ಯ ಜೀವಾಂಶ್ 200 ಮೀ. ಬಟರ್‌ಫ್ಲೈ ಹಾಗೂ 4×100 ಮೀ. ಬಟರ್ ಫ್ಲೈ ರಿಲೇಯಲ್ಲಿ 2 ಚಿನ್ನದ ಪದಕ ಹಾಗೂ 1500ಮೀ. ಫ್ರೀ ಸ್ಟೈಲ್ ನಲ್ಲಿ ಒಂದು ಬೆಳ್ಳಿ ಪದಕ ಪಡೆದಿದ್ದಾರೆ.
ರುತ್ವಾ 50 ಮೀ. ಬಟರ್ ಫ್ಲೈ, 4×50ಮೀ. ಫ್ರೀ ಸ್ಟೈಲ್ ರಿಲೇ ಹಾಗೂ 4×50 ಮೀ. ಮೆಡ್ಲಿ ರಿಲೇಯಲ್ಲಿ 3 ಬೆಳ್ಳಿ ಪದಕ ಪಡೆದಿದ್ದು, ಕೃಥಿಕ್ 100 ಮೀ. ಬಟರ್‌ಫ್ಲೈನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರ ಅತ್ಯುತ್ತಮ ಸಾಧನೆಯನ್ನು ಜಿಎಸ್ಎ ತಂಡ ಅಭಿನಂದಿಸಿದೆ.
ರಾಷ್ಟ್ರೀಯ ದಾಖಲೆ
ಮೈಸೂರಿನ ಜೀವಾಂಶ್ ಹಾಗೂ ಬೆಂಗಳೂರಿನ ಅಗತ್ಸ್ಯ ಕರ್ನಾಟಕದ ಇಬ್ಬರು 4×100 ಮೀ. ಬಟರ್ ಫ್ಲೈ ರಿಲೇ (1.04.01)ಯಲ್ಲಿ ಚಿನ್ನದ ಪದಕ ಪಡೆದು, ದಕ್ಷಿಣ ವಲಯದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಕರ್ನಾಟಕ ತಂಡವನ್ನು ಮುನ್ನಡೆಸಿದ ಪವನ್ ಕುಮಾರ್
ಈ ದಕ್ಷಿಣ ವಲಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ತಂಡದ ಕೋಚ್ ಆಗಿ ಮೈಸೂರಿನ ಜಿಎಸ್ಎಯ ಮುಖ್ಯ ತರಬೇತುದಾರರಾದ ಪವನ್ ಕುಮಾರ್ ಆಯ್ಕೆಯಾಗಿದ್ದರು.
ಇವರ ನೇತೃತ್ವದಲ್ಲಿ ಕರ್ನಾಟಕ ತಂಡವು ಸಮಗ್ರ ಚಾಂಪಿಯನ್ ಶಿಪ್ ಪಡೆದು ಕರ್ನಾಟಕಕ್ಕೆ ಹೆಮ್ಮೆ ತಂದಿದೆ.
ಇವರ ಉತ್ತಮ ಮಾರ್ಗದರ್ಶನ, ಸತತ ಪರಿಶ್ರಮದಿಂದ ಮೈಸೂರಿನಲ್ಲಿ ಉದಯೋನ್ಮುಖ ಈಜುಪಟುಗಳು ಹೊರಹೊಮ್ಮುತ್ತಿದ್ದು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿ, ಪದಕಗಳ ಬೇಟೆಯೊಂದಿಗೆ, ರಾಷ್ಟ್ರದಾದ್ಯಂತ ಮೈಸೂರಿನ ಕೀರ್ತಿಯನ್ನು ಬೆಳಗುತ್ತಿದ್ದಾರೆ.
key words: South Zone National Aquatic Championship, Mysore, wins, 7 medals