ಬೆಂಗಳೂರು,ಸೆಪ್ಟೆಂಬರ್,26,2020(www.justkannada.in) : ಸರಕಾರಿ ಗೌರವದೊಂದಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ತಿರುವಳ್ಳೂರ್ ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್ ಹೇಳಿದ್ದಾರೆ.
ತಿರುವಳ್ಳೂರ್ ಜಿಲ್ಲೆ ತಾಮರೈಪಾಕಂ ಫಾರ್ಮ್ ಹೌಸ್ ನಲ್ಲಿ ಎಸ್ ಪಿ ಬಿ ಅವರ ಅಂತಿಮ ದರ್ಶನಕ್ಕೆ ಆಂಧ್ರ, ಕೇರಳ ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಮುಂಜಾಗ್ರತಾ ದೃಷ್ಟಿಯಿಂದ ಮಾಸ್ಕ್ ಕಡ್ಡಾಯ ಮಾಡಿದ್ದು, ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
key words : SP Balasubramanian’s-funeral-government-honors-Superintendent-Police Arvindan