ಸ್ಪೇನ್ , ಮಾರ್ಚ್ 17, 2020 (www.justkannada.in): ಸ್ಪೇನ್ ದೇಶದ ಫುಟ್ಬಾಲ್ ಕೋಚ್ ಫ್ರಾನ್ಸಿಸ್ಕೊ ಗಾರ್ಸಿಯಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
21 ವರ್ಷದ ಗಾರ್ಸಿಯಾ 2016 ರಿಂದ ಅಟ್ಲೆಟಿಕೊ ಪೋರ್ಟಡಾ ಅಲ್ಟಾ ಯುವ ತಂಡದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ವಾರದ ಹಿಂದೆ ಗಾರ್ಸಿಯಾ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
ನಂತರ ಮಲಾಗಾದಲ್ಲಿರುವ ರೀಜನಲ್ ಹಾಸ್ಪಿಟಲ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಜೊತೆಗೆ ಲ್ಯೂಕೇಮಿಯಾದಿಂದ ಸಹ ಗಾರ್ಸಿಯಾ ಬಳಲುತ್ತಿರುವುದು ಪತ್ತೆಯಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.