ಬೆಂಗಳೂರು,ಮಾರ್ಚ್,22,2025 (www.justkannada.in): ಬಜೆಟ್ ಅಧಿವೇಶನದಲ್ಲಿ 15 ದಿನಗಳ ಕಾಲಕಲಾಪ ನಡೆದಿದೆ ನಡೆದಿದ್ದು, 27 ವಿಧೇಯಕಗಳನ್ನ ಅಂಗೀಕಾರ ಮಾಡಲಾಗಿದೆ. ಅಶಿಸ್ತಿನಿಂದಾಗಿ ಸದನದಿಂದ 18 ಶಾಸಕರನ್ನು ಅಮಾನತು ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ ಯುಟಿ ಖಾದರ್, 99 ಗಂಟೆ 34 ನಿಮಿಷ ಒಟ್ಟು ಕಲಾಪ ನಡೆದಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದಿದ್ದು, 14 ಸದಸ್ಯರು ಇದರ ಬಗ್ಗೆ ಮಾತನಾಡಿದ್ದರು. ಮಾರ್ಚ್ 7 ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದರು. ಬಜೆಟ್ ಮೇಲೆ 80 ಶಾಸಕರು ಚರ್ಚಿಸಿದ್ದರು. ಕಲಾಪದಲ್ಲಿ 27 ವಿಧೇಯಕಗಳನ್ನ ಅಂಗೀಕರಿಸಲಾಗಿದೆ. 3096 ಪ್ರಶ್ನೆಗಳನ್ನ ಸ್ವೀಕರಿಸಲಾಗಿತ್ತು. 195 ಪ್ರಶ್ನೆಗಳಲ್ಲಿ 189 ಕ್ಕೆ ಉತ್ತರಿಸಲಾಗಿದ. 2 ಖಾಸಗಿ ವಿಧೇಯಕಗಳನ್ನ ಮಂಡಿಸಲಾಗಿದ್ದು, ಎರಡು ಹಕ್ಕುಚ್ಯುತಿಗಳು ಮಂಡನೆಯಾಗಿದ್ದವು. ಅವುಗಳನ್ನ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಿಎಂ,ಸಚಿವರು, ಶಾಸಕರು ಕಲಾಪ ನಡೆಯಲು ಸಹಕರಿಸಿದರು. ಬೆಳಗ್ಗೆ 8 ರಿಂದ ರಾತ್ರಿ10 ರವರೆಗೆ ಸದನ ನಡೆಸಿದ್ದೇವೆ. ಇದಕ್ಕೆ ಎಲ್ಲರೂ ಗೌರವಕೊಟ್ಟು ಬಂದಿದ್ದಾರೆ. ಶಾಸಕರು ಚರ್ಚೆಗಾಗಿ ಬೆಳಗ್ಗೆಯೇ ಬರ್ತಿದ್ರು. ಎಲ್ಲ ಶಾಸಕರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಎಲ್ಲರಿಗೆ ನಾನು ಕೃತಜ್ಙತೆ ಸಲ್ಲಿಸ್ತೇನೆ. ಪೊಲೀಸ್ ಇಲಾಖೆ, ಅಧಿಕಾರಿಗಳಿಗೆ ಕೃತಜ್ಙತೆ ಸಲ್ಲಿಸುತ್ತೇನೆ ಎಂದರು.
ಶಾಸಕರ ಅಮಾನತು ಸಮರ್ಥಿಸಿಕೊಂಡ ಸ್ಪೀಕರ್ ಯುಟಿ ಖಾದರ್
ಶಾಸಕರ ಅಮಾನತು ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಘಟನೆ ನಡೆದಾಗ ತೀರ್ಮಾನ ನೀಡಲಾಗಿದೆ. ಇಷ್ಟೇ ಸಮಯ ಅನ್ನೋದು ಚರ್ಚೆಯಿಲ್ಲ. ಸದನಕ್ಕಿಂತ ದೊಡ್ಡದು ಯಾವುದು ಇಲ್ಲ. ಸದನ ಪಾವಿತ್ರ್ಯತೆ ಬಹಳ ಮುಖ್ಯ. ಗೆದ್ದು ಬಂದಾಗ ಪ್ರತಿಜ್ಙೆ ಮಾಡಿರುತ್ತೇವೆ. ಜನರ ಪರವಾಗಿ ಇರುತ್ತೇವೆ ಅಂತ ಪ್ರತಿಜ್ಞೆ ಮಾಡಿರ್ತೇವೆ. ಸರ್ಕಾರದ ಒತ್ತಡಕ್ಕೆ ಮಾಡಿದ್ದಲ್ಲ. ಅವರು ತಿದ್ದಿಕೊಳ್ಳಬೇಕು ಅಂತ ಮಾಡಿರೋದು. ಅವರನ್ನ ಸರಿಪಡಿಸೋಕೆ ಮಾಡಿದ್ದೇವೆ. ಅವರು ರಿಕ್ವೆಸ್ಟ್ ಮಾಡಿದ ನಂತರ ಚರ್ಚಿಸಬಹುದು. ನಾವು ತಪ್ಪು ಮಾಡಿದ್ದೇವೆ ಅನ್ನೋ ಭಾವನೆ ಅವರಿಗಿಲ್ಲ. ತಪ್ಪಿನ ಅರಿವು ಅವರಿಗೆ ಬರಬೇಕಿತ್ತಲ್ಲ. ಇಂತಹ ವರ್ತನೆ ಸರಿಯಾಗಬೇಕು. ಅವರಿಗೆ ಶಿಸ್ತು ಕಲಿಸುವ ಪ್ರಯತ್ನ ಇದಾಗಿದೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡರು.
ಸಚಿವರ ಮೇಲಿನ ಹನಿಟ್ರ್ಯಾಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಸಡನ್ ಆಗಿ ಯತ್ನಾಳ್ ಅವರು ಮಾತನಾಡಿದರು. ಆಗ ಗೃಹ ಸಚಿವರು ಉತ್ತರ ಕೊಟ್ಟರು. ಈ ರೀತಿ ಆಗಬಾರದು ಅಂತ ಎಲ್ಲರು ಕೇಳಿದರು. ಆಡಳಿತ, ಪ್ರತಿಪಕ್ಷ ಸದಸ್ಯರು ಕೇಳಿಕೊಂಡರು. ದೂರು ಬಂದ ತಕ್ಷಣ ತನಿಖೆ ಅಂತ ಗೃಹಸಚಿವರು ಹೇಳಿದರು. ಉನ್ನತ ಮಟ್ಟದ ತನಿಖೆ ಮಾಡ್ತೇವೆ ಅಂದರು. ಮರು ದಿನ ಬೆಳಗ್ಗೆ ಸಿಎಂ ಬಂದಿದ್ದರು. ಬಜೆಟ್ ಮೇಲೆ ಉತ್ತರಕ್ಕೆ ಬಂದಿದ್ದರು. ಆಗ ಪ್ರತಿಪಕ್ಷ ನಾಯಕರಿಗೆ ಅವಕಾಶ ಕೊಡಲಿಲ್ವಾ?. ಸದಸ್ಯರ ಗೌರವ ಘನತೆಗೆ ಸಹಕಾರ ಕೊಟ್ಟಿದ್ದವು. ಸಿಎಂ ಕೂಡ ಇದಕ್ಕೆ ಉತ್ತರ ಕೊಟ್ಟರಲ್ಲ. ಸಿಎಂ, ಗೃಹ ಸಚಿವರು ಚರ್ಚೆ ವೇಳೇ ಇತಿಶ್ರೀ ಹಾಡುತ್ತೇವೆ ಅಂತ ಹೇಳಿದ್ದರಲ್ಲ. ಸದನದಲ್ಲೇ ಸಿಎಂ ಉತ್ತರವನ್ನ ಕೊಟ್ಟರಲ್ಲ. ಆದರೂ ಕೆಲವರು ಹನಿಟ್ರ್ಯಾಪ್ ಕೇಸ್ ಸಿಬಿಐ, ಸಿಟ್ಟಿಂಗ್ ಜಡ್ಜ್ ತನಿಖೆ ಮಾಡಲಿ ಅಂದ್ರು. ಸಲಹೆ ಸ್ವೀಕರಿಸುವುದಾಗಿ ಸಿಎಂ ಹೇಳಿದರು. ಆದರೆ ಅದನ್ನ ಅವರು ಉಲ್ಲಂಘಿಸಿದ್ದಾರಲ್ಲ. ಅದಕ್ಕೆ ಅವರನ್ನ ಅಮಾನತು ಮಾಡಿದ್ದು. ಸಿಎಂ ಉತ್ತರದ ವೇಳೆಯೂ ಅಡ್ಡಿ ಪಡಿಸಿದರು ಎಂದು ತಿಳಿಸಿದರು.
ಗೊಂದಲಗಳು ಇದ್ರೂ ಫೈನಾನ್ಸ್ ಬಿಲ್ ಮಾಡಿದ್ದೇವೆ. ವಿಧೇಯಕ ಬಿಲ್ ಹರಿದು ಮುಖಕ್ಕೆ ಬಿಸಾಕುತ್ತಾರೆ. ಫೈನಾನ್ಸ್ ಬಿಲ್ ಗೆ ಅಡ್ಡಿ ಪಡಿಸಿದ್ದು ಸರಿಯೇ?. ಇವರ ಗದ್ದಲಕ್ಕೆ ನಿಲ್ಲಿಸಿದ್ದರೆ ಏನಾಗ್ತಿತ್ತು. ಇದು ನಾನೊಬ್ಬ ಆಲೋಚನೆ ಮಾಡುವ ವಿಚಾರವಲ್ಲ. ಸಂವಿಧಾನಕ್ಕೆ ಗೌರವ ತರುವ ಕೆಲಸ ಆಗಬೇಕು. ಅದಕ್ಕೆ ನಾವು ಅಮಾನತು ಮಾಡಿದ್ದು. ಮುಂದೆ ಬರುವವರಿಗೂ ಇದು ಪಾಠ ಆಗಬೇಕು. ನನಗೂ ಅಮಾನತು ಬಗ್ಗೆ ನೋವಿದೆ ಎಂದರು.
ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಯಾರೋ ಒಂದಿಬ್ಬರು ಹೇಳಿರಬಹುದು. ಇದನ್ನ ಬಹುತೇಕರು ಶ್ಲಾಘಿಸಿದ್ದಾರೆ. ಒಂದು ಪರ್ಸೆಂಟ್ ಮೇಲೆ ಅನುಮಾನ ಇರಬಹುದು. 99 ಪರ್ಸೆಂಟ್ ಜನ ಉತ್ತಮರಿದ್ದಾರಲ್ಲ. ಪೊಲೀಸರು ಇರೋದು ಯಾಕೆ. ಪೊಲೀಸರಿಗೆ ಸಂಬಳ ಕೊಡೋದು ಯಾಕೆ? ಭದ್ರತೆ ನೋಡಿಕೊಳ್ಳಲಿ ಎಂದು ತಾನೇ?. ಜನ ಬಂದು ನೋಡಿ ಹೋದರಲ್ಲ. ಅವರೇನು ಪೀಠಕ್ಕೆ ಅನಾಚಾರ ಮಾಡಿದರು. ಭಕ್ತಿಪೂರ್ವಕವಾಗಿ ಬಂದು ನೋಡಿ ಹೋಗಿದ್ದಾರೆ. 50, 60 ಸಾವಿರ ಜನ ಬಂದು ಹೋಗಿದ್ದಾರೆ. ಜನರನ್ನ ವಿಶ್ವಾಸದಿಂದ ನೋಡಬೇಕು ಎಂದು ಸಲಹೆ ನೀಡಿದರು.
ಸದನದ ಅವಧಿ ಹೆಚ್ಚು ಮಾಡಿದ ವಿಚಾರ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅಧಿಕಾರಿ,ಸಿಬ್ಬಂದಿಗಳ ಬೇಸರ ಇಲ್ಲ ಎಂದರು.
[ಸಭಾಪತಿ ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲವೆಂಬ ಆರೋಪ ವಿಚಾರ, ಅವರು ಅನುಭವಸ್ತರಿದ್ದಾರೆ. ಅವರು ಹಿರಿಯರಿದ್ದಾರೆ. ನಾವು ಒಗ್ಗಟ್ಟಿನಿಂದಲೂ ಹೋಗ್ತಿದ್ದೇವೆ. ಇಬ್ಬರ ನಡುವೆ ಯಾವುದೇ ಭಿನ್ನಾಬಿಪ್ರಾಯ ಇಲ್ಲ ಎಂದರು.
ಇಡೀ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ಅಲಂಕಾರ
ಇಡೀ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ಅಲಂಕಾರ ಮಾಡಿದ್ದೇವೆ. ಅದರ ಕೆಲಸ ಪೂರ್ಣಗೊಂಡಿದೆ. ಏಪ್ರಿಲ್ ನಲ್ಲಿ ಅದರ ಉದ್ಘಾಟನೆಯಾಗಲಿದೆ. ಶನಿವಾರ, ಭಾನುವಾರ ಸಂಜೆ ಆಗ್ತವೆ. ಬೇರೆ ಕಾರ್ಯಕ್ರಮಇದ್ದಾಗಲೂ ವಿದ್ಯುತ್ ಅಲಂಕಾರ ಇರಲಿದೆ. ಟೂರಿಸಂ ರೀತಿಯಲ್ಲಿ ಮಾಡೋಕೆ ಪ್ರಯತ್ನವಿದೆ ಎಂದು ಯುಟಿ ಖಾದರ್ ಹೇಳಿದರು.
ವಿದ್ಯುತ್ ದೀಪಾಲಂಕರಾಕ್ಕೆ 5 ಕೋಟಿ ಖರ್ಚು ಬರಲಿದೆ. ಟೂರಿಸಂ ಇಲಾಖೆ ಮೂಲಕ ಮಾಡುವ ಚಿಂತನೆ ಇದೆ. 300 ಶಾಸಕರು, ಅಧಿಕಾರಿಗಳಿಗೆ ಬೇಕಾಗುವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಕುಮಾರಕೃಪಾ ಅತಿಥಿಗೃಹದ ರೀತಿ ಮಾಡುವುದಿದೆ. ಟೂರಿಸಂ, ಪಿಡಬ್ಲ್ಯುಡಿ ಸಚಿವರ ಜೊತೆ ಚರ್ಚಿಸ್ತೇವೆ. ಅನುಕೂಲವಾಗುವ ರೀತಿ ಮಾಡುತ್ತೇವೆ ಎಂದು ಯು.ಟಿ.ಖಾದರ್ ಹೇಳಿದರು.
Key words: 27 bills, passed , 15 days, session, Speaker, UT Khader