ಮಾ.6 ಮತ್ತು 7ರಂದು ಇ-Epic ಕುರಿತು ವಿಶೇಷ ಆಂದೋಲನ….

ಮೈಸೂರು. ಮಾರ್ಚ್ 3,2021(www.justkannada.in):  ಇ-Epic ಗೆ ಸಂಬಂಧಿಸಿದಂತೆ ಮಾರ್ಚ್  06 ಹಾಗೂ 07 ರಂದು ವಿಷೇಶ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.jk

ಮತದಾರರ ಪಟ್ಟಿ ಪರಿಷ್ಕರಣೆ ಅರ್ಹತಾ ದಿನಾಂಕ 01.01.2021 ಕ್ಕೆ ಸಂಬಂಧಿಸಿದಂತೆ 18-19 ವರ್ಷ ಪೂರೈಸಿ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವಂತಹ ಯುವ ಮತದಾರರಿಗೆ Electronic Electors Photo Identity Card (e-EPIC) download  ಮಾಡಿಕೊಳ್ಳಲು 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ದಿನ 25ನೇ ಜನವರಿ 2021ರಂದು ಅನುಷ್ಟಾನಗೊಳಿಸಲಾಗಿತ್ತು.

ಮೊದಲನೇ ಹಂತವಾಗಿ 2021ರ ಜನವರಿ 25 ಯಿಂದ ಜನವರಿ 31 ರವರೆಗೆ 18-19 ವರ್ಷ ವಯಸ್ಸಿನ ಯುವ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮತದಾರರ ಗುರುತಿನ ಚೀಟಿಯನ್ನು (e-EPIC) https://www.nvsp.in/, https://voterportal.eci.gov.in and Voter helpline Mobile Apps (Android and IOS)  ಮುಖಾಂತರ ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ದಿನಾಂಕ: 06.03.2021 ಹಾಗೂ 07.03.2021 ರಂದು ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು” ಅಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರತಿ ಮತಗಟ್ಟೆಗಳಲ್ಲಿ ಎಲ್ಲಾ ಬಿ.ಎಲ್.ಒ. ಗಳು ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದವಾಣಿಯಾಗಿರುವ ಯುವ ಮತದಾರರುಗಳಿಗೆ E-Epic ನ್ನು Android or IOS mobile  ಮೂಲಕ ಡೌನ್ ಲೋಡ್ ಮಾಡಿಕೊಳ್ಳುವ ಕುರಿತು ಅಗತ್ಯ ಸಲಹೆಯನ್ನು ನೀಡಲಾಗುವುದು.

ಯುವ ಮತದಾರರು ತಮ್ಮ ಹತ್ತಿರದ ಮತಗಟ್ಟೆಗೆ ತೆರಳಿ E-Epic ನ್ನು Android or IOS mobile ಮೂಲಕ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಬಿ.ಎಲ್.ಒಗಳಿಂದ ಹಾಗೂ ಮೈಸೂರು ನಗರ ವ್ಯಾಪ್ತಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ / ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು / ತಹಶೀಲ್ದಾರ್ ಅವರ ಕಚೇರಿಗಳಲ್ಲಿ E-Epic ನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸಲಹೆಯನ್ನು ಪಡೆಯಬಹುದು.

Special campaign - e-Epic –mysore-march- 6th -7th
ಕೃಪೆ-internet

ಭಾರತ ಚುನಾವಣಾ ಆಯೋಗ ನೀಡಿರುವ ಈ ಅವಕಾಶವನ್ನು ಎಲ್ಲಾ ಯುವ ಮತದಾರರು ಸದುಪಯೋಗಪಡಿಸಿಕೊಂಡು ವಿಶೇಷ ಆಂದೋಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Key words: Special campaign – e-Epic –mysore-march- 6th -7th