ಮೈಸೂರು,ಜೂನ್,16,2022(www.justkannada.in): ಯಾವುದೇ ಪದವಿಗಳನ್ನು ಪೂರೈಸಿದ ವಿದ್ಯಾರ್ಥಿಗಳು ಕಂಪೆನಿಗಳು, ಸೇರಿದಂತೆ ನಾನಾ ದೊಡ್ಡ ಸಂಸ್ಥೆಗಳಲ್ಲಿ ಔದ್ಯೋಗಿಕ ಜೀವನ ಆರಂಭಿಸಲು ಕೆಲವೊಂದು ವಿಶೇಷ ಕೌಶಲ್ಯಗಳು ಬೇಕಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವ ಆರ್. ಶಿವಪ್ಪ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಯುನಿವರ್ಸಿಟಿ ಇಂಡಸ್ಟ್ರಿ ಇಂಟ್ರಾಕ್ಷನ್ ಸೆಂಟರ್ ವತಿಯಿಂದ ಗುರುವಾರ ಮೈಸೂರು ವಿವಿ ಆವರಣದ ರಾಣಿ ಬಹದ್ದೂರು ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಟು ಕಾರ್ಪೋರೇಟ್ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂಪೆನಿ, ಕೈಗಾರಿಕೆ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವುದು ವಿಶ್ವವಿದ್ಯಾನಿಲಯದ ಪ್ರಮುಖ ಕಾರ್ಯವಾಗಿದೆ. ಇವುಗಳನ್ನು ದೊರಕಿಸಿಕೊಡುವುದು ವಿವಿಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಟು ಕಾರ್ಪೋರೇಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಟೀಮ್ ವರ್ಕ್ ನ ಫಲಿತಾಂಶದ ಅರಿವು ಇರಬೇಕು. ಅದಕ್ಕಾಗಿ ಅಧ್ಯಯನ ಅವಧಿಯಲ್ಲಿ ಟೀಮ್ ವರ್ಕ್ ನಲ್ಲಿ ಪಾಲ್ಗೊಳ್ಳಬೇಕು. ಇದಲ್ಲದೇ ತಿಳಿದಿರುವ ಭಾಷೆಯಲ್ಲಿ ಹೇಳಬೇಕಾದ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದರು. ವಿದ್ಯಾರ್ಥಿಗಳು ಒಗ್ಗಟ್ಟು, ವಿಶ್ವಾಸಾರ್ಹತೆ ಬೆಳೆಸಿಕೊಳ್ಳಬೇಕು. ಮಾತ್ರವಲ್ಲದೇ ನಾನ್ ಟೆಕ್ನಿಕಲ್ ಸ್ಕಿಲ್ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎ.ಎಸ್. ಸತೀಶ್, ಯುನಿವರ್ಸಿಟಿ ಇಂಡಸ್ಟ್ರಿ ಇಂಟ್ರಾಕ್ಷನ್ ಸೆಂಟರ್ ನಿರ್ದೇಶಕ ಪ್ರೊ.ಬಿ.ಮಹದೇವಪ್ಪ, ಮಾನಸಗಂಗೋತ್ರಿ ಬಿಐಎಂಎಸ್ ಮುಖ್ಯಸ್ಥ ಪ್ರೊ.ಡಿ. ಆನಂದ್, ಸಂಪನ್ಮೂಲ ವ್ಯಕ್ತಿ ಹೇಮಲತಾ ಹಾಗೂ ಇತರರು ಇದ್ದರು.
Key words: Special skills- necessary –mysore university- registrar-Prof. Shivappa
ENGLISH SUMMARY….
Special skills required to start professional life: UoM Registrar Prof. Shivappa
Mysuru, June 16, 2022 (www.justkannada.in): “Irrespective of the stream of graduation, the students require special skills to start working in big companies,” observed Prof. R. Shivappa, Registrar, University of Mysore.
He inaugurated a special lecture program on the topic, “Campus to Corporate,” held at the Rani Bahaddur Auditorium in the Manasa Gangotri campus, organized by the University Industry Interaction Center of the University of Mysore. In his address, he said, “connecting the students with the company and industrial activities is one of the major tasks of the University. The Campus to Corporate program fulfils this purpose.”
“The students should be aware of the results of the team work. Hence, they should take part in the team work while learning. You should also develop capability in explaining what they have learnt, in an effective way in, respective language. You should also develop unity and confidence, along with non-technical skills,” he advised.
Syndicate member Dr. Chaitra Narayan, Mysore Chamber of Commerce President A.S. Satish, University Industry Interaction Center Director Prof. B. Mahadevappa, Manasa Gangotri BIMS Chief Prof. D. Anand, Resource Person Hemalath and others were present.
Keywords: Campus to Corporate/ lecture program/ University of Mysore