ಬೆಂಗಳೂರು,ಆಗಸ್ಟ್,24,2021(www.justkannada.in): ಸಾರಿಗೆ ಇಲಾಖೆ ನಷ್ಟದಲ್ಲಿದೆ. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು ಸಾರಿಗೆ ಇಲಾಖೆ ಸೇವೆಯ ಜೊತೆಗೆ ಲಾಭ ತರಲೂ ಕ್ರಮ ತೆಗೆದುಕೊಳ್ಳಲಾಗಿದೆ. ಆರ್ಥಿಕ ಶಿಸ್ತು ತರಲು ವಿಶೇಷ ಟಾಸ್ಕ್ ಪೋರ್ಸ್ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಹಿತಿ ನೀಡಿದ ಸಚಿವ ಶ್ರೀರಾಮುಲು, ಟಿಕೆಟ್ ಏರಿಕೆ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಎಲ್ಲಾ ನಿಗಮಗಳ MDಗಳ ಜೊತೆ ಸಾಕಷ್ಟು ಸುದೀರ್ಘವಾದ ಚರ್ಚೆ ಆಗಿದೆ. ಇಲಾಖೆಯಲ್ಲಿ ಹೊಸ ಸುಧಾರಣೆ ತರಲು ತೀರ್ಮಾನ ಮಾಡಲಾಗಿದೆ. ಕೊವೀಡ್ 1 ಮತ್ತು 2 ಹಾಗೂ 3ನೇ ಅಲೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕೋವಿಡ್ ನಿಂದ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಆಗಿದೆ. ಸಾರಿಗೆ ಇಲಾಖೆ ಸೇವೆಯ ಜೊತೆಗೆ ಲಾಭ ತರಲೂ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ವಾರ ದೆಹಲಿಗೆ ತೆರಳಿ, ಕೇಂದ್ರ ಸಚಿವರನ್ನ ಭೇಟಿ ಮಾಡಲಾಗುವುದು ಎಂದರು.
ಒಂದು ನೇಷನ್ ಒಂದು ಕಾರ್ಡ್, ಕಾರ್ಮಿಕ ಮಹಿಳೆಯರಿಗೆ ಉಚಿತ ಪ್ರಯಾಣ ಆಗಬೇಕಿದೆ. ನಿಗಮದಲ್ಲಿ 100ರಿಂದ 200 ಕೋಟಿ ನಷ್ಟ ಆಗ್ತಿದೆ. ನಿಗಮಗಳನ್ನು ಲಾಭದತ್ತ ತರಬೇಕಿದೆ. 7,354ಅಂತರ ನಿಗಮ ವರ್ಗಾವಣೆ ಅರ್ಜಿ ಬಂದಿದ್ದವು. 4,854 ನೌಕರರು ಅರ್ಹತೆ ಹೊಂದಿದ್ದಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಮಾಹಿತಿ ಇದೆ. ಸದ್ಯ ಇಲಾಖೆಯನ್ನ ಲಾಭದತ್ತ ತೆಗೆದುಕೊಂಡು ಹೋಗಬೇಕಿದೆ. ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ನಾನು ಮಾತನಾಡಲ್ಲ, ನಾವೂ ಹೋರಾಟ ಮಾಡಿ ಬಂದವರು. ಸದ್ಯ ನಷ್ಟದ ಇಲಾಖೆಯನ್ನ ಲಾಭದತ್ತ ತರಬೇಕಿದೆ. ಕೋಡಿಹಳ್ಳಿ ಜೊತೆ ಸರ್ಕಾರ ಮಾತನಾಡಲಿದೆ ಎಂದರು.
KSRTC ಗೆ 427 ಕೋಟಿ, BMTC ಗೆ 548 ಕೋಟಿ, NWKSRTC ಗೆ 389 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 191 ಕೋಟಿರೂ. ಕೋವಿಡ್ ನಿಂದ ನಷ್ಟ ಆಗಿದೆ. ಮುಂದಿನ ತಿಂಗಳಿಂದ ಸಾರಿಗೆ ನೌಕರರಿಗೆ ಯಾವುದೇ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳುವೆ ಎಂದು ಶ್ರೀರಾಮುಲು ತಿಳಿಸಿದರು.
ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಬಸ್ ಪಾಸ್ ನೀಡುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದ ಸಚಿವ ಶ್ರೀರಾಮುಲು, ರಾಜಕಾರಣ ಅಂದ್ರೆ ಇದೆಲ್ಲ ಇರುತ್ತೆ. ಈ ಇಲಾಖೆ ಬೇಕು ಎಂದು ಹೇಳಲಾಗುತ್ತಾ? ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಖಾತೆ ನನಗೆ ನೀಡಿದ್ದಾರೆ. ಆನಂದ್ ಸಿಂಗ್ ನನ್ನ ಸ್ನೇಹಿತರು, ಅವರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಇನ್ನು ಸಾರಿಗೆ ನೌಕರರ ಪರವಾಗಿ ನಿಲ್ತೇವೆ. ಕೆಲವರು ಕೋರ್ಟ್ ಗೂ ಹೋಗಿದ್ದಾರೆ ಎಂದರು.
Key words: special task force – Minister –shriramulu-bus ticket- price hike