ಮೈಸೂರು,ಸೆಪ್ಟಂಬರ್,22,2020(www.justkannada.in): ಕೊರೋನಾ ಹಾವಳಿಯಿಂದಾಗಿ ಮುಂದೂಡಿಕೆಯಾಗಿದ್ದ ಐಪಿಎಲ್ ಪಂದ್ಯಾವಳಿಯನ್ನ ದುಬೈನಲ್ಲಿ ಆಯೋಜಿಸಲಾಗಿದ್ದು ಈಗಾಗಲೇ ಐಪಿಎಲ್ ಕಿಕ್ ಸ್ಟಾರ್ಟ್ ಆಗಿದೆ. ಈ ನಡುವೆ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಮೈಸೂರು ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸೆಪ್ಟಂಬರ್ 19 ರಿಂದಲೇ ಐಪಿಎಲ್ ಪಂದ್ಯಾವಳಿ ಆರಂಭವಾಗಿದ್ದು, ಈ ವೇಳೆ ನಡೆಯುವ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಮೈಸೂರು ಪೊಲೀಸರಿಂದ ಸ್ಪೆಷಲ್ ಟೀಮ್ ರೆಡಿಯಾಗಿದೆ. ಆನ್ಲೈನ್ ಬುಕ್ಕಿಂಗ್, ಸೈಬರ್ ಸೆಂಟರ್ ಗಳ ಮೇಲೆ ಖಾಲಿ ಕಣ್ಗಾವಲಿಟ್ಟಿದ್ದು, ದಂಧೆಕೋರರು ಕದ್ದುಮುಚ್ಚಿ ಹಣಕ್ಕಾಗಿ ಯುವಕರನ್ನ ಸೆಳೆಯಲು ಮುಂದಾದರೆ ಪೊಲೀಸರಿಗೆ ಮಾಹಿತಿ ಸಿಗಲಿದೆ.
ಹಳೆ ಬೆಟ್ಟಿಂಗ್ ದಂಧೆಕೋರರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ಐಪಿಎಲ್ ಜೂಜುಕೋರರೇ ಪೊಲೀಸರಿಗೆ ಸಿಕ್ಕಿಬಿದ್ರೆ ಇದೆ ತಕ್ಕಶಾಸ್ತಿಯಾಗುವುದು ಖಂಡಿತ.
ಇನ್ನು ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಪಿ ಡಾ. ಎ.ಪ್ರಕಾಶ್ ಗೌಡ, ಈ ಹಿಂದಿನ ಐಪಿಎಲ್ ದಂಧೆ ಪ್ರಕರಣಗಳನ್ನ ನಾವು ಗಮನಿಸುತ್ತಿದ್ದೇವೆ.ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ನಮಗೆ ಬೆಂಬಲ ಕೊಡಬೇಕು. ಕ್ರಿಕೆಟ್ ಬೆಟ್ಟಿಂಗ್ ನಡೆಯುವ ವಿಷಯ ತಿಳಿದು ಬಂದಲ್ಲಿ ನಮಗೆ ಮಾಹಿತಿ ಕೊಡಿ. ನಮಗೆ ಮಾಹಿತಿ ನೀಡುವವರ ಹೆಸರನ್ನ ಗೌಪ್ಯವಾಗಿ ಇಡಲಾಗುತ್ತೆ. ಆರೋಪಿಗಳನ್ನ ಬಂಧಿಸುತ್ತವೆ. ಇದರಿಂದ ಬೆಟ್ಟಿಂಗ್ ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ತಡೆಗಾಗಿ ಸಿಸಿಬಿ ತಂಡ ರಚಿಸಲಾಗಿದ್ದು ದಂಧೆಯಲ್ಲಿ ತೊಡಗುವವರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.
Key words: Special Team -Ready – Mysore Police -IPL -Betting