ಮೈಸೂರು,ಜೂ,20,2020(www.justkannada.in): ಸೂರ್ಯಗ್ರಹಣ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಸಲಾಗಿದೆ.
ನಾಳೆ ಭಾನುವಾರ ಹಿನ್ನಲೆ ಚಾಮುಂಡಿಬೆಟ್ಟದ ದೇವಾಲಯ ಬಂದ್ ಆಗಲಿದ್ದು ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ಸೂರ್ಯ ಗ್ರಹಣ ಹಿನ್ನಲೆಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್, ಗ್ರಹಣದ ಸ್ಪರ್ಶ ಕಾಲದಿಂದ ಗ್ರಹಣದ ಮೋಕ್ಷ ಕಾಲದವರೆಗೆ ಸತತ 3 ಗಂಟೆಗಳ ಕಾಲ ಪೂಜೆಗೆ ಸಿದ್ದತೆ ನಡೆಸಲಾಗಿದೆ. ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಮೂಲ ವಿಗ್ರಹಕ್ಕೆ ನಾಲ್ಕು ಬಾರಿ ಅಭಿಷೇಕ ಮಾಡಲಾಗುತ್ತದೆ. ಸ್ವರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಭಿಷೇಕ ಮಾಡಲಾಗುವುದು. ಗ್ರಹಣ ಪೂಜೆ ವೇಳೆ ಪ್ರಧಾನ ಅರ್ಚಕರನ್ನ ಬಿಟ್ಟು ಮತ್ಯಾರಿಗೂ ಪ್ರವೇಶವಿರುವುದಿಲ್ಲ. ಗ್ರಹಣ ಮೋಕ್ಷವಾದ ನಂತರ ದೇವಾಲಯದ ಶುದ್ದಿಕಾರ್ಯ ನಡೆಯುತ್ತದೆ ಎಂದು ತಿಳಿಸಿದರು.
Key words: Special worship –mysore-Chamundi hills- Restriction- devotees