ಮುಂಬೈ: ಮೇ- 11 :(www.justkannada.in) ಸ್ಪೈಸ್ ಜೆಟ್ ನ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈಗಾಗಲೇ ವಾಯುಯಾನ ಕ್ಷಮತೆ ಬಗ್ಗೆ ವಿವಾದಕ್ಕೀಡಾಗಿರುವ ಸ್ಪೈಸ್ ಜೆಟ್ ಏರ್‍ಲೈನ್ಸ್ ಸಂಸ್ಥೆಯ ಎರಡು ವಿಮಾನಗಳಲ್ಲಿ ಆಗಸದಲ್ಲೇ ತಾಂತ್ರಿಕ ದೋಷ ಕಂಡು ಬಂದಿದೆ. ರಾತ್ರಿ 7.30ರಲ್ಲಿ ಮುಂಬೈನಿಂದ ಚೆನ್ನೈಗೆ ಹಾರಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, ತಕ್ಷಣ ಎಚ್ಚೆತ್ತ ಪೈಲೆಟ್‍ಗಳು ವಿಮಾನವನ್ನು ಮತ್ತೆ ಮುಂಬೈನತ್ತ ತಿರುಗಿಸಿ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿಸಿದ್ದಾರೆ.
ಇದೇ ರೀತಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಇದೇ ಸಂಸ್ಥೆಯ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಪೈಲೆಟ್‍ಗಳು ಕಾರ್ಯ ಪ್ರವೃತರಾಗಿ ವಿಮಾನವನ್ನು ನಾಗ್ಪುರದತ್ತ ದಿಕ್ಕು ಬದಲಾಯಿಸಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದರು. ನಿಗದಿತ ಸಮಯದಲ್ಲಿ ವಿಮಾನ ತೆರಳದ ಹಿನ್ನಲೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಸ್ಪೈಸ್ ಜೆಟ್‍ನಲ್ಲಿ ಮತ್ತೆ ತಾಂತ್ರಿಕ ದೋಷ: ಎರಡು ವಿಮಾನಗಳ ತುರ್ತು ಭೂ ಸ್ಪರ್ಶ; ಪ್ರಯಾಣಿಕರ ಪರದಾಟ
SpiceJet flights suffer mid air glitches
Two of the SpiceJet’s Boeing passenger planes- one from Mumbai and other from Bengaluru- suffered mid-air technical glitches