ಬೆಂಗಳೂರು,ನವೆಂಬರ್,13,2020(www.justkannada.in) : ಜಿಕೆವಿಕೆಯಲ್ಲಿ ಪ್ರಮುಖ ಕೃಷಿ ಬೆಳೆಗಳಲ್ಲಿ ಸಂವೇದಕ ಆಧಾರಿತ ಸ್ವಯಂಚಾಲಿತ ನೀರಾವರಿ ತಂತ್ರಜ್ಞಾನದ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಪ್ರಾಯೋಜನೆಗೆ ಬಟನ್ ಒತ್ತಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಮೇಳದಲ್ಲಿ ಸಾಕಷ್ಟು ಔಷಧಿಯ ಗಿಡಗಳನ್ನು ಪ್ರಾತ್ಯಕ್ಷಿಕೆ ಮಾಡಲಾಗಿದೆ. ಅಲ್ಲದೇ, ಸಮಗ್ರ ಕೃಷಿ ಆಧಾರಿತ ಬೆಳೆಗಳನ್ನು ಪರಿಚಯಿಸಲಾಗಿದೆ. ರೈತರು ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟು ಇಂತಹ ತಳಿಗಳ ಪರಿಚಯ ಮಾಡಿಕೊಳ್ಳಬೇಕು ಎಂದರು.
ನಾಳೆಯಿಂದ ರೈತರೊಂದಿಗೊಂದು ದಿನ ಆರಂಭ
ಕೃಷಿಯಲ್ಲಿ ತೊಡಗಿಸಿಕೊಳ್ಳುವುದೇ ಉತ್ತಮ ಕೆಲಸ. ಇನ್ನೊಬ್ಬರಿಗೆ ಅನ್ನ ಕೊಡುವ ಕೆಲಸ ಇದು. ಮಂತ್ರಿ ಎಂದರೆ ಬರೀ ವಿಧಾನಸೌಧದಲ್ಲಿ ಕೂತು ಕೆಲಸ ಮಾಡುವುದಲ್ಲ. ರೈತರ ಬಳಿಗೆ ಹೋಗುವುದು ಪ್ರೋತ್ಸಾಹ ನೀಡುವುದು. ಇಲಾಖೆಗೆ ಹೊಸ ಆಯಾಮ ನೀಡಲು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಖುದ್ದು ರೈತರನ್ನು ಭೇಟಿ ಮಾಡಲು ನಾಳೆಯಿಂದ ರೈತರೊಂದಿಗೊಂದು ದಿನ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.
key words : sponsor-Research-Demonstration-Automated- Irrigation-Technology-Driven-Minister-B.C.Patil