ಬೆಂಗಳೂರು,ಜು,16,2020(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು ಈ ನಡುವೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಲಾಕ್ಡೌನ್ ಸಂದರ್ಭದಲ್ಲೇ ಸೋಂಕು ನಿಯಂತ್ರಿಸಲು ನಗರದ ಎಂಟು ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪೂರ್ಣ ಹೊಣೆ ನೀಡಿದ್ದಾರೆ. ಈ ಮಧ್ಯೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಕೇವಲ ರಸ್ತೆಗಳಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಸರಹದ್ದಿನಲ್ಲೂ ಅಗ್ನಿ ಶಾಮಕದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು. ಎಡಿಜಿಪಿ ಸುನೀಲ್ ಅಗರ್ ವಾಲ್ , ವಿಕ್ಟೋರಿಯಾ ಆಸ್ಪತ್ರೆ ಬಳಿ ಈ ಕಾರ್ಯಕ್ಕೆ ಚಾಲನೆ ನೀಡಿದರು.
Spraying of disinfectant in an entire bangalore city symbolically inaugurated by ADGP Sunil Agrawal IPS at Victoria Hospital.
Key words: Spraying – disinfectant – bangalore –city- ADGP -Sunil Agrawal