ಮೈಸೂರಿನ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ

ಮೈಸೂರು,ಏಪ್ರಿಲ್,16,2025 (www.justkannada.in): ನಗರದ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ  ಬುಧವಾರ ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಯಿತು.

ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 10:15 ಗಂಟೆಗೆ ಬ್ರಹ್ಮೋಪದೇಶ ನೆರವೇರಿಸಲಾಯಿತು. ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರೆವೇರಿಸಲಾಯಿತು.  ಉಪನಯನ ಉದ್ದೇಶಿಸಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ,  ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದರು.

ವೇದವೆಂದರೆ ಜ್ಞಾನ, ಸಂಸ್ಕೃತಿ, ಪರಂಪರೆಗೆ ಸಾಕ್ಷಿ. ಭಾರತ ಮಾತ್ರವಲ್ಲ ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ವೇದ ಮಂತ್ರಗಳು ವ್ಯಕ್ತಿ ಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು’ ಎಂದು ಹೇಳಿದರು.

ವಿದ್ವಾನ್ ಸುರೇಶ್ ಭಟ್ ರವರು   ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ  ತಿಳಿಸಿಕೊಟ್ಟರು. ಆನಂತರ ವಟುಗಳಿಗೆ ಮತ್ತು ಪೋಷಕರಿಗೆ ಪ್ರಸಾದ ವಿತರಿಸಲಾಯಿತು.

ಪಿ ಎಸ್ ಶೇಖರ್,  ಕಾರ್ಯದರ್ಶಿ ಕೆ ವಿ ಶ್ರೀಧರ್,  ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್,  ಕಾರ್ಯದರ್ಶಿ ರಾಘವೇಂದ್ರ,  ಸುಬ್ರಹ್ಮಣ್ಯ ತಂತ್ರಿ,  ವಿಜೇಂದ್ರ, ಕಿರಣ್ ತಂತ್ರಿ,  ಪದ್ಮನಾಭ ಭಟ್,  ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಹಾಗೂ  ವಟುಗಳ  ಪೋಷಕರು  ವಿಪ್ರರು ಆಶೀರ್ವದಿಸಿದರು ಹಾಜರಿದ್ದರು.

Key words: Free, Upanayana, Sri Krishna Dhama, Mysore