ಬೆಂಗಳೂರು, ಜುಲೈ 23, 2019 (www.justkannada.in): ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಲೈಫ್ ಸ್ಟೋರಿ ತೆರೆ ಮೇಲೆ ಅನಾವರಣಗೊಳ್ಳಲು ಸಿದ್ಧತೆ ನಡೆದಿದೆ.
ಕಾಲಿವುಡ್ ನಟ ವಿಜಯ್ ಸೇತುಪತಿ ಸ್ಪೀನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಪಾತ್ರ ನಿಭಾಯಿಸಲಿದ್ದಾರಂತೆ. ಮುತ್ತಯ್ಯ, ಅಂತಾರಾಷ್ಟ್ರೀಯ ಟೆಸ್ಟ್ನಲ್ಲಿ ಪಡೆದ ವಿಕೆಟ್ಗಳ (800) ಸಂಖ್ಯೆಯನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಲಿದೆ ಎನ್ನುವ ಚರ್ಚೆ ಶುರುವಾಗಿದೆ.
ಈ ವರ್ಷದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ದೊಡ್ಡ ಬಜೆಟ್ನ ಈ ಸಿನಿಮಾ ಭಾರತ, ಶ್ರೀಲಂಕಾ,ಇಂಗ್ಲೆಂಡ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ. ಈ ಕುರಿತು ಅಧಿಕೃತ ಹೇಳಿಕೆ ಬಂದಿಲ್ಲ.