ಬೆಂಗಳೂರು, ಜೂನ್ 16, 2021 (www.justkannada.in): ಶ್ರೀಲಂಕಾ ಪ್ರವಾಸ ತೆರಳಲಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಎರಡು ಸರಣಿಗಳಿಗೆ ರಾಹುಲ್ ದ್ರಾವಿಡ್ ಅವರು ಶಿಖರ್ ಧವನ್ ನೇತೃತ್ವದ ಬಾರತೀಯ ತಂಡಕ್ಕೆ ತರಬೇತಿ ನೀಡಲಿದ್ದಾರೆ.
ಪ್ರವಾಸ ತೆರಳಲಿರುವ ಭಾರತೀಯ ತಂಡದ 14-ದಿನಗಳ ಸಾಂಘಿಕ ಕ್ವಾರಂಟೈನ್ ನೆನ್ನೆಯಿಂದ ಮುಂಬೈಯಲ್ಲಿ ಆರಂಭವಾಗಿದೆ.
ದ್ರಾವಿಡ್ ಅವರು 19-ವರ್ಷದೊಳಗಿನವರ ಭಾರತೀಯ ತಂಡ ಮತ್ತು ಭಾರತ ಎ ಟೀಮುಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂಡ ಹೀಗಿದೆ:
ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್ದೀಪ್ ಸೈನಿ, ಚೇತನ್ ಸಕಾರಿಯಾ
ನೆಟ್ ಬೌಲರ್ಗಳು:
ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್