ಮೈಸೂರು,ಜೂ,15,2020(www.justkannada.in): ಹೆಚ್ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಗತ್ತೆ, ಅವ್ರಿಗೆ ಒಳ್ಳೆದಾಗುತ್ತೆ ಎಂಬ ವಿಶ್ವಾಸ ಇದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿದರು. ಈ ವೇಳೆ ಉಭಯ ನಾಯಕರು ಉಭಯ ಕುಶಲೋಪರಿ ವಿಚಾರಿಸಿ ಮಾತುಕತೆ ನಡೆಸಿದರು. ಇದೇವೇಳೆ ಮಾಧ್ಯಮಗಳಿಗೆ ಮಾತನಾಡಿದ ಸಚಿವ ನಾರಾಯಣ ಗೌಡ, ಹೆಚ್. ವಿಶ್ವನಾಥ್ ಗೆ ಸಚಿವ ಸ್ಥಾನ ಸಿಗುವ ವಿಚಾರ. ಅವರಿಗೆ ಒಳ್ಳೆದಾಗುತ್ತೆ ಎಂಬ ವಿಶ್ವಾಸ ಇದೆ. ಅದೆಲ್ಲಾ ಮಾತುಕತೆ ಆಯಾ ಲೆವಲ್ ನಲ್ಲಿ ಆಗುತ್ತೆ. ಅವರಿಗೆ ಪಕ್ಷದಲ್ಲಿ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅದೆಲ್ಲವು ದೊಡ್ಡವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾಗಿದ್ದೇವೆ ಎಂದು ನುಡಿದರು.
ವಿಶ್ವನಾಥ್ಗೆ ಸಚಿವ ಸ್ಥಾನ ಸಿಗುವ ವಿಚಾರ ಕುರಿತು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್ ಗೆ ಏನ್ ಅನ್ಯಾಯ ಆಗಿದೆ.? ಅವರು ನಮ್ಮನ್ನ ನಂಬಿ ಬಂದಿದ್ದಾರೆ. ಯಡಿಯೂರಪ್ಪನವರ ಬಳಿ ಎಲ್ಲಾ ಮಾತಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ನಾನು ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಸಿಎಂ ಜೊತೆ ವಿಶ್ವನಾಥ್ ಅವರು ಮಾತಾಡಿ ಆರಾಮವಾಗಿ ಹೋಗಿದ್ದಾರೆ. ಗೆದ್ದವರಿಗೆಲ್ಲ ಯಡಿಯೂರಪ್ಪನವರು ಸಚಿವ ಸ್ಥಾನ ಕೊಟ್ಟಿದ್ದಾರೆ. ಇದೀಗಾ ಸೋತವರು ಕೂಡ ಸಚಿವ ಕೇಳ್ತಿದ್ದಾರೆ. ಅವರು ಕೇಳಿದ್ದನ್ನ ಬೇಡ ಅಂತ ಹೇಳೋಣ್ವಾ.? ಪಕ್ಷ ಸೇರುವಾಗ ಏನು ಮಾತು ಕೊಟ್ಟಿದ್ದಾರೋ ಅದು ಅವ್ರಿಗೆ ಗೊತ್ತಿದೆ. ಅದನ್ನ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದರು.
ಇನ್ನು ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಮೂರು ವರ್ಷ ಯಡಿಯೂರಪ್ಪ ಅವ್ರು ಅಧಿಕಾರಿ ಕಂಪ್ಲೀಟ್ ಮಾಡ್ತಾರೆ. ಎಲ್ಲರು ರಾಷ್ಟ್ರೀಯ ಪಕ್ಷದಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ದರಾಗಿದ್ದಾರೆ. ಹಾಗಾಗಿ ಇದೆಲ್ಲವು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
Key words: Srinivas Prasad –residence-visit-Minister- Narayana Gowda-mysore