ಬೆಂಗಳೂರು,ಮಾರ್ಚ್,31,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಗೆ ನನ್ನದು ಪರೋಕ್ಷ ಬೆಂಬಲ ಅಂತ ಇಲ್ಲ. ಯತ್ನಾಳ್ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ಎಲ್ಲದರಲ್ಲೂ ಫೇಲ್ ಆಗಿದೆ. ಯತ್ನಾಳ್ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಹೈಕಮಾಂಡ್ ನಿರ್ಧಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಉಮಾಭಾರತಿ ಸಸ್ಪೆಂಡ್ ಆಗಿ ಪಕ್ಷಕ್ಕೆ ವಾಪಸ್ ಆಗುವಾಗ ಸುಸ್ತಾಗಿದ್ದರು. ಅವರು ಕೆಲಸ ಮಾಡಲು ಆಗಲಿಲ್ಲ ಆ ರೀತಿ ಯತ್ನಾಳ್ ಗೆ ಆಗಬಾರದು ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ನನ್ನದು ಶಾಸಕ ಯತ್ನಾಳ್ ಪರೋಕ್ಷ ಬೆಂಬಲ ಅಂತಾ ಇಲ್ಲ ಎಂದರು.
ನಾವು ಪಕ್ಷ ದೇಶ ಅಂತಾ ಕೆಲಸ ಮಾಡುತ್ತಿದ್ದೇವೆ. ಹೈಕಮಾಂಡ್ ನಿರ್ಧಾರ ಸರಿ, ತಪ್ಪು ಅಂತಾ ಚರ್ಚೆ ಮಾಡುವುದಿಲ್ಲ. ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಅನ್ನೋದೇ ನಮ್ಮ ಉದ್ದೇಶ. ಅದಕ್ಕಾಗಿ ವಿಜಯೇಂದ್ರ ನೇತೃತ್ವದಲ್ಲಿ ಜನಾಂದೋಲನ ಮಾಡುತ್ತಿದ್ದೇವೆ ಎಂದು ಶ್ರೀರಾಮುಲು ತಿಳಿಸಿದರು.
Key words: no, indirect support, MLA, Yatnal, Former Minister, Sriramulu