ಮಂಡ್ಯ,ಜೂನ್,4,2022(www.justkannada.in): ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ನಡೆಸುತ್ತಿದ್ದ ಶ್ರೀರಂಗಪಟ್ಟಣ ಚಲೋಗೆ ಪೊಲೀಸರು ತಡೆ ನೀಡಿದರು.
ಶ್ರೀರಂಗಪಟ್ಟಣ ಚಲೋಗೆ ಪೊಲೀಸರು ತಡೆ ನೀಡಿದ ಹಿನ್ನೆಲೆಯಲ್ಲಿ ದಸರಾ ಬನ್ನಿಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹನುಮಾನ್ ಚಾಲೀಸ್ ಪಠಣ ಮಾಡಿ ಪ್ರಸಾದ ವಿನಿಯೋಗಿಸಿದರು. ಈ ಮೂಲಕ ಶ್ರೀರಂಗಪಟ್ಟಣ ಚಲೋ ದಸರಾ ಬನ್ನಿಮಂಟಪದಲ್ಲಿ ಭಜನೆಗೆ ಸೀಮಿತವಾಯಿತು.
ಜಾಮಿಯಾ ಮಸೀದಿ ವಿಡಿಯೋ ಚಿತ್ರೀಕರಣವಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಭಜರಂಗದಳ ಜಿಲ್ಲಾ ಸಂಚಾಲಕ ಬಸವರಾಜ್ , ಮಸೀದಿ ಇರುವ ಜಾಗದಲ್ಲಿ ಅಡುಗೆ ಮಾಡುವಂತಿಲ್ಲ, ಅಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ. ಈ ಕೂಡಲೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು.ಮಸೀದಿಯಲ್ಲಿ ಹಿಂದೂ ದೇವರಗಳ ಹಲವಾರು ಕುರುಹುಗಳಿವೆ. ಇದನ್ನು ರಕ್ಷಿಸುವ ಹೊಣೆ ನಮ್ಮದೇ. ಪ್ರಾಣ ಹೋದರು ಬಿಡುವುದಿಲ್ಲ. ನಮ್ಮ ಹೋರಾಟ ನಡೆಯಲಿದೆ. ನಾವು ಕಾನೂನು ಮೂಲಕವೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತವೆ. ಕಾನೂನು ಪಾಲನೆಯನ್ನು ಮಾಡಲಿದ್ದೇವೆ. ನಾವು ಜಿಲ್ಲಾಡಳಿತಕ್ಕೆ ಕೊಟ್ಟಿರುವ ಮನವಿ ಬಗ್ಗೆ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಈಗಲೇ ಬಂದು ತಿಳಿಸಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನೆಲೆ, ಪ್ರತಿಭಟನಾ ಸ್ಥಳಕ್ಕೆ ಎಸಿ ಶಿವಾನಂದ ಮೂರ್ತಿ, ಶ್ರೀರಂಗಪಟ್ಟಣ ತಹಶಿಲ್ದಾರ್ ಶ್ವೇತ ಸ್ಥಳಕ್ಕೆ ಭೇಟಿ ನೀಡಿ ಹಿಂದೂ ಪರ ಸಂಘಟನೆಗಳ ಮನವಿ ಸ್ವೀಕರಿಸಿದರು. ಶ್ರೀರಂಗಪಟ್ಟಣದ ಉಪವಿಭಾಗಧಿಕಾರಿ ಮಾತನಾಡಿ, ಜಾಮೀಯಾ ಮಸೀದಿ ವಕ್ಫ್ ಬೋರ್ಡ್ ಗೆ ಸೇರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಕೊಂಡು ಮಾಹಿತಿ ನೀಡುತ್ತೇವೆ. ಸಂರಕ್ಷಿತಾ ಪುರಾತತ್ವ ಕಟ್ಟಡದಲ್ಲಿ ಮದರಸಾ ನಡೆಯುತ್ತಿರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಸ್ಪಷ್ಟಪಡಿಸುತ್ತೇವೆ. ಮದರಸಾದ ಬಗ್ಗೆ ಸ್ಪಷ್ಟೀಕರಣಕ್ಕೆ ಕೇಂದ್ರದ ಪುರಾತತ್ವ ಇಲಾಖೆಗೆ ಪತ್ರ ಬರೆಯುತ್ತೇವೆ. ಕಾನೂನಾತ್ಮಕವಾಗಿ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.
Key words: Srirangapatna Chalo- Jamia Mosque –demands- video
ENGLISH SUMMARY…
Srirangapatna Chalo restricted only for bhajan: Demand to video record Jamia Masjid
Mandya, June 4, 2022 (www.justkannada.in): Police prevented the Srirangapatna Chalo movement organized by the various pro-Hindu outfits demanding permission to offer pooja at the Jamia Masjid in Srirangapatna.
Following notice by the police the members of the various pro-Hindu outfits, along with the members of the Vishwa Hindu Parishat chanted Hanuman Chalisa at the Dasara Banni Mantap grounds. Thus, the Srirangapatna Chalo protest was restricted only to bhajan at the Dasara Banni Mantapa.
The members of the Hindu Jagarana Vedike demanded the police to video record the insides of the Jamia Masjid. Speaking on the occasion, “Bajrang Dal District Convener Basavaraj demanded that no food preparation should be made near the Masjid and offering namaz should be prohibited. The District administration should take action immediately. There are several pieces of evidence of Hindu deities, it is our responsibility to protect them. We won’t leave it even if we have sacrificed our lives. Our struggle will move on. We will fulfill our demands legally. We will follow the court’s orders,” he said and demanded the District Administration to inform what measures it has taken in this regard.
Keywords: Hindu Jagarana Vedike/ Srirangapatna Chalo/ Jamia Masjid/ Bhajan