ಮಂಡ್ಯ,ಮಾ,3,2020(www.justkannada.in): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಕೇರಳ ಮೂಲದ ತ್ಯಾಜ್ಯ ಪತ್ತೆಯಾಗಿದೆ.
ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಶ್ರೀರಂಗಪಟ್ಟಣ ಪಾಲಹಳ್ಳಿ ಬಳಿ ಎರಡು ಕಡೆ ಅಪಾರ ಪ್ರಮಾಣದ ಕೇರಳ ಮೂಲದ ತ್ಯಾಜ್ಯ ಪತ್ತೆಯಾಗಿದೆ. ಗ್ರಾಮದ ಮಹದೇವು ಅವರ ಜಮೀನು ಮತ್ತು ಲೋಕೇಶ್ ಅವರ ಆಲೆಮನೆಯಲ್ಲಿ ರಾಶಿಗಟ್ಟಲೆ ತ್ಯಾಜ್ಯ ಸಂಗ್ರಹಿಸಲಾಗಿದೆ.
ಮೈಸೂರಿನ ರಿಜ್ವಾನ್ ಮತ್ತು ಸಲೀಂಖಾಬ್ ಶ್ರೀರಂಗಪಟ್ಟಣದ ಆಲೆಮನೆಯಲ್ಲಿ ಪ್ಲಾಸ್ಟಿಕ್ ಇತರ ತ್ಯಾಜ್ಯವನ್ನು ಸಂಗ್ರಹಿಸಿದ್ದರು.ಕೇರಳದಿಂದ ಲಾರಿಗಳಲ್ಲಿ ತ್ಯಾಜ್ಯ ತರಿಸಿ ವಿಂಗಡಿಸಿ ಬೇರೆಡೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕೇರಳ ನೋಂದಣಿ ಭರ್ತಿ ಲಾರಿ ಪಾಲಹಳ್ಳಿ ಕಡೆ ಹೋಗುತ್ತಿದ್ದುದನ್ನು ಗಮನಿಸಿದ ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಪತ್ತೆಮಾಡಿದ್ದಾರೆ. ಬಳಿಕ ಸ್ಥಳಕ್ಕೆ ತಹಶಿಲ್ದಾರ್ ರೂಪ ಭೇಟಿ, ನೀಡಿದ್ದು ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
Key words: srirangapatna- Kerala waste -detection – Tahsildar- visit- inspection.