ಮೈಸೂರು,ಮಾರ್ಚ್,22,2024(www.justkannada.in): ಇದೇ ಮಾ.25 ರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಈಗಾಗಲೇ ಪರೀಕ್ಷಾ ಪೂರ್ವ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಡಿಡಿಪಿಐ ಎಚ್.ಕೆ ಪಾಂಡು ತಿಳಿಸಿದರು.
ಈ ಕುರಿತು ಮಾತನಾಡಿದ ಡಿಡಿಪಿಐ ಎಚ್.ಕೆ ಪಾಂಡು, ಮಾ.25 ಏಪ್ರಿಲ್ 6 ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿದೆ. ಮೈಸೂರಿನಲ್ಲಿ ನಗರ ಮತ್ತು ಗ್ರಾಮೀಣ ಭಾಗ ಸೇರಿ ಒಟ್ಟು 132 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಜಿಲ್ಲೆಯ ಒಟ್ಟು 40,333 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. 20046 ಬಾಲಕರು, 20287 ಬಾಲಕಿಯರು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.
ಪರೀಕ್ಷಾ ಪೂರ್ವ ಸಿದ್ದತೆಗಳು ಈಗಾಗಲೇ ನಡೆದಿದೆ. ಪರೀಕ್ಷೆ ಅಕ್ರಮ ತಡೆಯಲು ಜಿಲ್ಲಾಧಿಕಾರಿಗಳ ಮಾರ್ಗದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಕ್ಕಳು ಯಾವುದೇ ಭಯಭೀತಿ ಇಲ್ಲದೆ ನಿರ್ಭೀತಿಯಿಂದ ಪರೀಕ್ಷೆ ಎದುರಿಸಬೇಕು ಎಂದು ಡಿಡಿಪಿಐ ಎಚ್ ಕೆ ಪಾಂಡು ಹೇಳಿದರು.
Key words: SSLC- exam – March 25- All preparations -Mysore.