ಮೈಸೂರು,ಮಾರ್ಚ್,27,2022(www.justkannada.in): ರಾಜ್ಯದಲ್ಲಿ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಭೇಟಿ ನೀಡಿ ಅಂತಿಮ ಹಂತದ ಸಿದ್ದತೆ ಪರಿಶೀಲಿಸಿದರು. ಮೈಸೂರಿನ ಸಿ.ಕೆ.ಸಿ ಫ್ರೌಡಶಾಲೆಗೆ ಭೇಟಿ ನೀಡಿದ ರಾಮಚಂದ್ರ ರಾಜೇ ಅರಸ್, ಪರೀಕ್ಷಾ ಕೇಂದ್ರಗಳ ಕೊಠಡಿ ವೀಕ್ಷಣೆ ಮಾಡಿ ಕೊಠಡಿ ವ್ಯವಸ್ಥೆ, ಕೋವಿಡ್ ಮುಂಜಾಗ್ರತಾ ಕ್ರಮದ ಕುರಿತು ಶಾಲಾ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು. ಕೊನೆಯ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ಪರೀಕ್ಷೆ ಎದುರಿಸುವ ರೀತಿ, ಮಾರ್ಗದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನ ಹೇಳಿದರು.
ಪರೀಕ್ಷೆಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ರಾಮಚಂದ್ರ ರಾಜೇ ಅರಸ್, ಪ್ರತಿ ಬಾರಿಯಂತೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಶೇಷ ಅಧ್ಯತೆ ನೀಡಿಲಾಗಿದೆ. ಒಟ್ಟು 38138 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 149 ಪರೀಕ್ಷೆ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ದತೆ ಮಾಡಿ ಕೋಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಈ ಬಾರಿಯೂ ಕೋವಿಡ್ ಎಸ್ ಒಪಿ ಪಾಲನೆ ಮಾಡಲಾಗ್ತಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೋರೊನ ಪಾಸಿಟಿವ್ ಬಂದರೆ ತಾಲೂಕಿನಲ್ಲಿ ಒಂದು ಕೇಂದ್ರವನ್ನು ನಿಯೋಜಿಸಿದ್ದೇವೆ. ಆ ಕೇಂದ್ರಗಳಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಾಗುವುದು. ಪರೀಕ್ಷೆ ಈಗಗಲೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಅಂತಿಮ ಹಂತದ ಸಿದ್ದತೆ ಮುಗಿದಿದೆ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ಮಾಡಿ ಶಾಲಾ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ನಿಯಮದಂತೆ ಸಮವಸ್ತ್ರದಡಿಯಲ್ಲೇ ಪರೀಕ್ಷೆ ನಡೆಯುತ್ತೆ. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗಧಿಪಡಿಸಿದ ಸಮವಸ್ತ್ರದ ಅಡಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಬೇಕು. ಹಿಜಾಬ್ ವಿಚಾರವಾಗಿ ಮೈಸೂರು ಉತ್ತರ ವಲಯದ ಮೇಲೆ ನಿಗಾ ಇರಿಸಲಾಗಿದೆ. ಅಲ್ಲಿ ಹೆಚ್ಚಿನ ಪೊಲೀಸರ ಗಸ್ತು ಹಾಗೂ ನಿಯೋಜನೆಗೆ ಇಲಾಖೆ ಜೊತೆ ಮಾತನಾಡಿದ್ದೇನೆ. ಎಲ್ಲಾ ಶಾಲೆಗಳಲ್ಲೂ ಕೊರೋನಾ ಮುಂಜಾಗ್ರತೆ ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಧರಿಸಿ ಪರೀಕ್ಷೆ ಬರೆಯುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
Key words: SSLC -examination -DDPI-Ramachandra Raje Aras- Mysore district.