ಬೆಂಗಳೂರು,ಏಪ್ರಿಲ್,16,2021(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ. ಪರೀಕ್ಷೆ ರದ್ದು ಮಾಡಿದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಕೊರೋನಾ ನೆಪ ಹೇಳಿ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಲವು ಕಡೆ ಪೋಷಕರು ಪರೀಕ್ಷೆ ಬೇಡ ಎಂದರೆ ಶೇ.70ರಷ್ಟು ಪೋಷಕರು ಪರೀಕ್ಷೆ ಬೇಕು ಎನ್ನುತ್ತಾರೆ. ಕೋವಿಡ್ ನೆಪ ಹೇಳಿ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ. ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇರೆ ರಾಜ್ಯಗಳ ವ್ಯವಸ್ಥೆಯೇ ಬೇರೆ, ನಮ್ಮಲ್ಲಿಯೇ ಬೇರೆ. ಎಸ್ ಎಸ್ ಎಲ್ ಸಿ ಆಗದೆ ಬೇರೆಯದಕ್ಕೆ ಹೋಗಲಾಗುವುದಿಲ್ಲ. ಪರೀಕ್ಷೆ ನಡೆಸದಿದ್ದರೆ ಮಕ್ಕಳು ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಸ್ಯಾನಿಟೈಸ್, ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಮೂಡಿಸಲಿ. ಒಂದು ಕೊಠಡಿಯಲ್ಲಿ. 20 ಮಂದಿಗೆ ಪರೀಕ್ಷೆ ನಡೆಸಲಿ. ಆದರೆ ಪರೀಕ್ಷೆ ರದ್ಧು ಮಾಡುವುದು ಬೇಡ. ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
Key words: SSLC examination -should not be- cancel-Basavaraja horatti